ಹಾವೇರಿ: ಜಿಲ್ಲೆಯ ಹಲವೆಡೆ ಮಳೆರಾಯ ಅಬರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ರಟ್ಟೀಹಳ್ಳಿ ತಾಲೂಕಿನ ಖಂಡೇಬಾಗೂರು ಗ್ರಾಮದಲ್ಲಿ ಬಿರುಗಾಳಿ ಸಮೇತ ಮಳೆಗೆ 30ಕ್ಕೂ ಅಧಿಕ ಗುಡಿಸಲು ಹಾಗೂ ತಗಡಿನ ಶೆಡ್ಡಿನ ಮೇಲ್ಛಾವಣಿಗಳು ಹಾರಿ ಹೋಗಿದ್ದು, ಜನರ ದಿಕ್ಕು ತೋಚದೆ ಕುಳಿತಿದ್ದಾರೆ.

ಹಿರೇಕೆರೂರು ಪಟ್ಟಣ ಮತ್ತು ಭೋಗಾವಿ ಗ್ರಾಮದಲ್ಲೂ ಧಾರಾಕಾರ ಮಳೆಗೆ ಜನರು ನಲುಗಿದ್ದಾರೆ.
ನೆತ್ತಿ ಸುಡುವ ಬಿಸಿಲಿನ ಈ ಸಂದರ್ಭದಲ್ಲಿ ವರುಣ ತಂಪೆರೆದ ಎನ್ನುವ ಸಂತಸ ಒಂದು ಕಡೆಯಾದರೆ, ಮಳೆಗಾಲಕ್ಕೂ ಮುನ್ನವೇ ಈ ರೀತಿ ಅವಾಂತರ ಸೃಷ್ಟಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ.