ಹಾವೇರಿ:ನಿಜವಾದ ನೆರೆ ಸಂತ್ರಸ್ತರನ್ನು ಬಿಟ್ಟು ಬೇರೆಯವರಿಗೆ ಪರಿಹಾರ ಹಣ ಕೊಡಲಾಗಿದೆ ಎಂದು ಆರೋಪಿಸಿ ಹಾವೇರಿ ಸಮೀಪದ ದೇವಗಿರಿ ನೆರೆ ಸಂತ್ರಸ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದರು ಪ್ರತಿಭಟನೆ ನಡೆಸಿದ್ದಾರೆ.
ಸ್ವತಃ ಮಹಿಳೆಯರೇ ಹಲಗೆ ಹಿಡಿದು ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯತ್ ಅಧಿಕಾರಿಗಳು ತಮಗೆ ಅನ್ಯಾಯ ಮಾಡಿದ್ದಾರೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಬಲ ಇದ್ದವರಿಗೆ ಮನೆ ಹಾಗೂ ಸ್ವಲ್ಪ ಹಣ ನೀಡಲಾಗಿದೆ. ನಮ್ಮ ಮನೆ ಪೂರ್ತಿ ಬಿದ್ದರೂ ನಮಗೆ ಕಡಿಮೆ ಪರಿಹಾರ ಹಣ ನೀಡಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದರು. ಗ್ರಾಮ ಪಂಚಾಯತ್ ಅಧಿಕಾರಿಗಳು ಸಹ ರಾಜಕಾರಣಿಗಳ ತಾಳಕ್ಕೆ ಕುಣಿದಿದ್ದು, ತಮಗೆ ಅನ್ಯಾಯವಾಗಿದೆ ಎಂದು ದೂರಿದರು.
ಜಿಲ್ಲಾಡಳಿತ ಈ ಕೂಡಲೇ ತಮಗೆ ಆದ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.