ಹಾನಗಲ್:ತಾಲೂಕಿನ ಅಕ್ಕಿಆಲೂರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎರಡನೇ ಬಾರಿ ಕಾಯಕಲ್ಪ ಪ್ರಶಸ್ತಿ ದೊರೆತಿದೆ.
ಸತತ 2ನೇ ಬಾರಿಗೆ ಕಾಯಕಲ್ಪ ಪ್ರಶಸ್ತಿಗೆ ಭಾಜನವಾದ ಅಕ್ಕಿಆಲೂರ ಆಸ್ಪತ್ರೆ! - ಅಕ್ಕಿಆಲೂರ ಆಸ್ಪತ್ರೆಗೆ 2ನೇ ಬಾರಿಗೆ ಪ್ರಶಸ್ತಿ ಸುದ್ದಿ
ಉತ್ತಮ ವೈದ್ಯಕೀಯ ಸೇವೆ ಮತ್ತು ಸ್ವಚ್ಚತೆಯಿಂದಾಗಿ ಈ ಬಾರಿಯೂ ಸರ್ಕಾರದ ಗಮನ ಸೆಳೆದಿರುವ ಹಾನಗಲ್ನ ಅಕ್ಕಿಆಲೂರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎರಡನೇ ಬಾರಿ ಕಾಯಕಲ್ಪ ಪ್ರಶಸ್ತಿ ದೊರೆತಿದೆ.
ರಾಜ್ಯ ಸರಕಾರದ ಕುಟುಂಬ ಕಲ್ಯಾಣ ಇಲಾಖೆ ಹಲವು ಮಾನದಂಡ ಅನುಸರಿಸಿ ಕಾಯಕ ಕಲ್ಪ ಪ್ರಶಸ್ತಿ ನೀಡುತ್ತಿದೆ. ಉತ್ತಮ ವೈದ್ಯಕೀಯ ಸೇವೆಯ ಜೊತೆಗೆ ಸ್ವಚ್ಚತೆಗೆ ಆದ್ಯತೆ ನೀಡಿರುವ ಇಲ್ಲಿಯ ಆರೋಗ್ಯ ಕೇಂದ್ರ, ಇಲಾಖೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರಶಸ್ತಿಯು 1 ಲಕ್ಷ ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆ ಸಿಬ್ಬಂದಿಯೊಬ್ಬರು, ರೋಗಿಗಳಿಗೆ ಸಕಾಲಕ್ಕೆ ವೈದ್ಯಕೀಯ ಸೇವೆ ನೀಡಿದೆ ಮತ್ತು ಕೋವಿಡ್ ಸಂದರ್ಭದಲ್ಲಿಯೂ ಸುರಕ್ಷಿತ ರೀತಿಯಲ್ಲಿ ಯಶಸ್ವಿಯಾಗಿ ಹೆರಿಗೆಗಳನ್ನ ನಿರ್ವಹಿಸಿದೆ. ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕೆ ಅನೂಕೂಲಕರ ರೀತಿಯಲ್ಲಿ ಈ ಆಸ್ಪತ್ರೆಯ ಸಿಬ್ಬಂದಿ ಸ್ಪಂದಿಸಿದ್ದಾರೆ, ಕಾಯಕ ನಿಷ್ಠೆಯೇ ಈ ಪ್ರಶಸ್ತಿಗೆ ಕಾರಣ ಎಂದರು.