ಕರ್ನಾಟಕ

karnataka

ETV Bharat / state

ಮೃತ ನವೀನ್​ ನಿವಾಸಕ್ಕೆ ಮಾಜಿ ಸಚಿವ ಎಚ್​ ಕೆ ಪಾಟೀಲ್​ ಭೇಟಿ - HK Patil visited Haveri Naveen Residence

ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ಮೃತ ನವೀನ್​​​​​​ ಮನೆಗೆ ಇಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರು​​ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Former Minister HK Patil visited Haveri Naveen Residence
ಮೃತ ನವೀನ್​ ನಿವಾಸಕ್ಕೆ ಮಾಜಿ ಸಚಿವ ಎಚ್​ಕೆ ಪಾಟೀಲ್​ ಭೇಟಿ

By

Published : Mar 5, 2022, 6:09 PM IST

Updated : Mar 5, 2022, 7:07 PM IST

ಹಾವೇರಿ: ಉಕ್ರೇನ್​ನಲ್ಲಿ ಬಾಂಬ್​​ ದಾಳಿಯಿಂದ ಮೃತಪಟ್ಟ ವಿದ್ಯಾರ್ಥಿ ನವೀನ್​ ನಿವಾಸಕ್ಕೆ ಮಾಜಿ ಸಚಿವ ಎಚ್.ಕೆ.ಪಾಟೀಲ್​​ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮೃತ ನವೀನ್​ ನಿವಾಸಕ್ಕೆ ಮಾಜಿ ಸಚಿವ ಎಚ್​ ಕೆ ಪಾಟೀಲ್​ ಭೇಟಿ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುವಕ ನವೀನ್​​ ಬಾಂಬ್ ದಾಳಿಯಲ್ಲಿ ನಮ್ಮನ್ನು ಅಗಲಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇನೆ. ಕುಟುಂಬಸ್ಥರಿಗೆ ಮಗನನ್ನು ಕಳೆದುಕೊಂಡ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪಾರ್ಥಿಸಿದರು.

ಯುದ್ಧದ ಸಂಕಷ್ಟದಲ್ಲಿರುವ ಎಲ್ಲಾ ಭಾರತೀಯರನ್ನು ಕೇಂದ್ರ ಸರ್ಕಾರ ಆದಷ್ಟು ಬೇಗ ಕರೆತರುವ ಕೆಲಸ ಮಾಡಬೇಕು. ಯುದ್ಧ ಭೂಮಿಯ ಸಮೀಪ ರಷ್ಯಾದ ವಿಮಾನ ನಿಲ್ದಾಣ ಇದೆ. ಅಲ್ಲಿಂದ ಭಾರತೀಯರನ್ನು ಕರೆತರುವ ಕೆಲಸ ಮಾಡಬೇಕು. ನಮ್ಮ ದೇಶಕ್ಕೆ ಎಲ್ಲಾ ಮಕ್ಕಳು ಸುರಕ್ಷಿತವಾಗಿ ಬರಲಿ ಎಂದು ಹಾರೈಸಿದರು.

ಇದನ್ನೂ ಓದಿ: ಮೃತ ನವೀನ್​ ನಿವಾಸಕ್ಕೆ ವಿವಿಧ ಮಠದ ಸ್ವಾಮೀಜಿಗಳು ಭೇಟಿ : ಕುಟುಂಬಸ್ಥರಿಗೆ ಸಾಂತ್ವನ

Last Updated : Mar 5, 2022, 7:07 PM IST

For All Latest Updates

TAGGED:

ABOUT THE AUTHOR

...view details