ಕರ್ನಾಟಕ

karnataka

ETV Bharat / state

ಬೆಳೆ ನಾಶ, ಸಾಲಬಾಧೆಯಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ - haveri farmer suicide news

ಸಾಲಬಾಧೆ, ಬೆಳೆಹಾನಿಯಿಂದ ನೊಂದ ರಾಣೆಬೆನ್ನೂರು ತಾಲೂಕಿನ ಜೋಯಿಸರಹಳ್ಳಿ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತ ಆತ್ಮಹತ್ಯೆ

By

Published : Oct 25, 2019, 10:45 AM IST

ಹಾವೇರಿ:ಸಾಲಬಾಧೆ, ಬೆಳೆಹಾನಿಯಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಣೆಬೆನ್ನೂರು ತಾಲೂಕಿನ ಜೋಯಿಸರಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಿರಕಪ್ಪ ಬೀರಪ್ಪ ಕೊಳ್ಳೆರ(45) ಆತ್ಮಹತ್ಯೆಗೆ ಶರಣಾದ ರೈತ. ಇವರು ತಮ್ಮ ಗ್ರಾಮದಲ್ಲಿ 3.5 ಎಕರೆ ಜಮೀನು ಹೊಂದಿದ್ದು, ಹೊಲದಲ್ಲಿ ಮೆಕ್ಕೆಜೋಳ ಮತ್ತು ಹತ್ತಿ ಬೆಳೆ ಬೆಳೆದಿದ್ದರು.ಸತತ ಮಳೆಯಿಂದ ಫಲವತ್ತಾದ ಬೆಳೆ ನಾಶವಾಗಿತ್ತು ಇದರಿಂದ ಮನನೊಂದಿದ್ದರು.ಇವರು ಬ್ಯಾಂಕ್ ಸಾಲ ಸೇರಿ ಸುಮಾರು 6.5 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಬೆಳೆ ನಾಶಕ್ಕೆ ನೊಂದು ಮತ್ತು ಸಾಲಬಾಧೆಗೆ ಹೆದರಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details