ಹಾವೇರಿ:ಕುಮುದ್ವತಿ ಮತ್ತು ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಮತ್ತು ರಾಣೇಬೆನ್ನೂರು ತಾಲೂಕಿನ ಹಲವು ಗ್ರಾಮಗಳು ಜಲಾವೃತವಾಗಿವೆ.
ಹಾವೇರಿಯಲ್ಲಿ ಹೆಚ್ಚಿದ ಪ್ರವಾಹ, ಮನೆ-ಮಠ ತೊರೆದ ಗ್ರಾಮಸ್ಥರು - ತುಂಗಭದ್ರಾ
ಹಾವೇರಿ ಜಿಲ್ಲೆಯಲ್ಲಿ ಪ್ರವಾಹ ಹೆಚ್ಚಾದ ಪರಿಣಾಮ ಹಲವು ಗ್ರಾಮಗಳು ಜಲಾವೃತಗೊಡಿದ್ದು, ಜನರು ಸುರಕ್ಷಿತ ಪ್ರದೇಶಗಳತ್ತ ತೆರಳುತ್ತಿದ್ದಾರೆ.
ರಟ್ಟೀಹಳ್ಳಿ ತಾಲೂಕಿನ ಮಳಗಿ, ಕುಡುಪಲಿ, ತೋಟಗಂಟಿ, ಯಡಗೋಡ, ಮಾಸೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳು ಜಲಾವೃತಗೊಂಡಿವೆ. ಮತ್ತೊಂದೆಡೆ ರಾಣೇಬೆನ್ನೂರು ತಾಲೂಕಿನ ಹರನಗಿರಿ, ಚಂದಾಪುರ, ಊದಗಟ್ಟಿ, ಕುಪ್ಪೇಲೂರು, ಹಿರೇಮಾಗನೂರು, ಮುಷ್ಟೂರು, ಮಾಗನೂರು ಸೇರಿದಂತೆ ಹಲವು ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದೆ.
ಮನೆಗಳಿಗೆ ನೀರು ಆವರಿಸಿರುವುದರಿಂದ ಜನರು ಸುರಕ್ಷಿತ ಸ್ಥಳಗಳಿಗೆ ಧಾವಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನ ತೆಗೆದುಕೊಂಡು ಚಕ್ಕಡಿ, ತೆಪ್ಪದ ಮೂಲಕ ಮನೆ ಖಾಲಿ ಮಾಡುತ್ತಿದ್ದಾರೆ. ಸಾವಿರಾರು ಹೆಕ್ಟೇರ್ ಜಮೀನಿನಲ್ಲಿ ಬೆಳೆದಿದ್ದ ಹತ್ತಿ, ಮೆಕ್ಕೆಜೋಳ, ಶೇಂಗಾ, ಸೋಯಾಬಿನ್, ಕಬ್ಬು, ಬಾಳೆ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿವೆ.