ಹಾವೇರಿ:ಬೆಳೆ ಹಾನಿಯಿಂದ ಬೇಸತ್ತ ರೈತನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೆಸರಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಳೆಹಾನಿಯಿಂದ ಬೇಸತ್ತ ರೈತ: ನೇಣು ಬಿಗಿದು ಆತ್ಮಹತ್ಯೆಗೆ ಶರಣು
ಬೆಳೆ ಹಾನಿಯಿಂದ ಬೇಸತ್ತ ರೈತನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೆಸರಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಳೆಹಾನಿಯಿಂದ ಬೇಸತ್ತ ರೈತ: ನೇಣು ಬಿಗಿದು ಆತ್ಮ ಹತ್ಯೆಗೆ ಶರಣು
ಎರಡೂವರೆ ಎಕರೆ ಜಮೀನು ಹೊಂದಿದ್ದ ರೈತ ಕಲ್ಲಪ್ಪ ಹೂಗಾರ ಬ್ಯಾಂಕ್ ಮತ್ತು ಕೈಸಾಲ ಎಂದು ಒಂದೂವರೆ ಲಕ್ಷ ರೂಪಾಯಿ ಹಣ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಕೃಷಿಗಾಗಿ ಆರು ತೊಲೆ ಬಂಗಾರವನ್ನ ಬ್ಯಾಂಕ್ನಲ್ಲಿ ಅಡವಿಟ್ಟಿದ್ದ ಕಲ್ಲಪ್ಪ ನೆರೆಯಿಂದಾಗಿ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಮತ್ತು ಮೆಕ್ಕೆಜೋಳ ಕಳೆದುಕೊಂಡಿದ್ದನು. ಮಾಡಿದ ಸಾಲ ತೀರಿಸಲಾಗದೆ ಮತ್ತು ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲಾಗದೆ ಬೇಸತ್ತು ಕಲ್ಲಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
TAGGED:
ನೇಣು ಬಿಗಿದುಕೊಂಡು ಆತ್ಮಹತ್ಯೆ