ರಾಣೇಬೆನ್ನೂರ:ಸರಿಯಾಗಿ ಬೆಳೆ ಬಾರದೆ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿದ್ದ ಎನ್ನಲಾದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚೌಡಯ್ಯದಾನಪುರದಲ್ಲಿ ನಡೆದಿದೆ.
ಸಾಲಬಾಧೆ.. ವಿಷ ಕುಡಿದು ರಾಣೇಬೆನ್ನೂರಿನ ರೈತ ಆತ್ಮಹತ್ಯೆ..
ಸಾಲಬಾಧೆ ಹಾಗೂ ಬೆಳೆ ಸರಿಯಾಗಿ ಬಾರದ ಕಾರಣ ರೈತನೋರ್ವ ರಾಣೇಬೆನ್ನೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹನುಮಂತಪ್ಪ ನೀಲಪ್ಪ ಬನ್ನಿಮಟ್ಟಿ(61) ಮೃತ ರೈತ. ತಾಲೂಕಿನ ಹೊನ್ನತ್ತಿ ಕೆವಿಜಿ ಬ್ಯಾಂಕ್ನಲ್ಲಿ ಇಪ್ಪತ್ತು ಸಾವಿರ ಹಾಗೂ ಕೈಗಡ 4 ಲಕ್ಷಕ್ಕಿಂತಲೂ ಅಧಿಕ ಸಾಲ ಮಾಡಿದ್ದನು ಎನ್ನಲಾಗಿದೆ. ಹತ್ತಿ ಬೆಳೆ ಸರಿಯಾಗಿ ಆಗದೆ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಈ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.