ಹಾವೇರಿ:ರಾಣೇಬೆನ್ನೂರು ತಾಲೂಕಿನ ಲಿಂಗದಳ್ಳಿ ಗ್ರಾಮದ ರೈತನೋರ್ವ ಸಾಲಬಾಧೆಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳೆದ ಬೆಳೆ ಕೈಗೆ ಬರಲಿಲ್ಲ... ಸಾಲಕ್ಕೆ ಹೆದರಿ ಪ್ರಾಣಬಿಟ್ಟ ರೈತ
ಸಾಲಬಾಧೆಗೆ ಹೆದರಿ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಶೋಕ ಬಸವಣ್ಣೆಪ್ಪ ಹೊರಕೆರಿ (32) ವಿಷ ಸೇವಿಸಿದ ರೈತ.
ವಿಷ ಸೇವಿಸಿ ರೈತ ಆತ್ಮಹತ್ಯೆ
ಅಶೋಕ ಬಸವಣ್ಣೆಪ್ಪ ಹೊರಕೆರಿ (32) ಮೃತ ರೈತ. ಇವರು ಎಸ್ಬಿಐ ಬ್ಯಾಂಕ್ನಲ್ಲಿ 3.5 ಲಕ್ಷ ರೂ. ಹಾಗೂ 1 ಲಕ್ಷ ರೂ. ಕೈ ಸಾಲ ಪಡೆದಿದ್ದರು.
ಸಾಲ ತೀರಿಸಲು ಜಮೀನಿನಲ್ಲಿ ಭತ್ತದ ಬೆಳೆ ಬೆಳದಿದ್ದರು. ಆದರೆ, ಅತಿಯಾದ ಮಳೆಯಿಂದ ಉಂಟಾದ ನೆರೆಗೆ ಬೆಳೆ ಸಂಪೂರ್ಣ ಹಾನಿಯಾಗಿತ್ತು. ಬೆಳೆ ಕೈಗೆ ಬಾರದ ಹಿನ್ನೆಲೆ ನೊಂದ ರೈತ, ಸಾಲ ತೀರಿಸಲು ಬೇರೆ ಮಾರ್ಗಗಳು ಇರದ ಕಾರಣ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.