ಹಾವೇರಿ:ರಾಣೆಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ 20.40 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
2018 ರ ಚುನಾವಣೆಯಲ್ಲಿ 25,31,668 ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ಈ ಬಾರಿ 4,75 ಕೋಟಿಯಷ್ಟು ಇಳಿಕೆ ಕಂಡು ಬಂದಿದೆ.
9,93,96,628 ಮೌಲ್ಯದ ಚರಾಸ್ತಿ,1.05.61,500 ಮೌಲ್ಯದ ಸ್ಥಿರಾಸ್ತಿ, ಒಟ್ಟು 10,99,58,128 ಮೌಲ್ಯದ ಆಸ್ತಿ ಹೊಂದಿದ್ದಾರೆ.
ಇನ್ನು 15,32 ಕೋಟಿ ಸಾಲ ಮಾಡಿದ್ದು, ಪತ್ನಿ ಪ್ರಭಾವತಿ ಹೆಸರಿನಲ್ಲಿ 40,83,099 ಮೌಲ್ಯದ ಚರಾಸ್ತಿ, 9,07,25,175 ಸ್ಥಿರಾಸ್ತಿ ಹೊಂದಿದ್ದಾರೆ. 600 ಗ್ರಾಂ ಚಿನ್ನ, 21,6000-00 ಮೌಲ್ಯದ ಬಂಗಾರ, 5 ಕೆಜಿ ಬೆಳ್ಳಿ, 2,25,000-00 ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ.
ಹಿರೇಕೆರೂರು ಜೆಡಿಎಸ್ ಅಭ್ಯರ್ಥಿ ಒಟ್ಟು ಆಸ್ತಿ:
ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಒಟ್ಟು ಆಸ್ತಿ 2.13 ಕೋಟಿ ರೂ. 23,02,196ರೂ. ಚರಾಸ್ತಿ,1.90ಕೋಟಿ ಸ್ಥಿರಾಸ್ತಿ ಸೇರಿದಂತೆ 2.13ಕೋಟಿ ರೂ. ಮೌಲ್ಯದ ಆಸ್ತಿ ಇದೆ. 20 ಲಕ್ಷ ರೂ. ಕೃಷಿ ಸಾಲ ಇರುವುದಾಗಿಯೂ ತಿಳಿಸಿದ್ದಾರೆ. 50ಸಾವಿರ ರೂ. ನಗದು, 5.60ಲಕ್ಷ ರೂ. ಮೊತ್ತದ ಜೀವ ವಿಮೆ, 8.25ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್, 4.5ಲಕ್ಷ ರೂ. ಮೌಲ್ಯದ ಟಾಟಾ ಸುಮೋ ವಾಹನ ಇವರಲ್ಲಿದೆ. 7.5ಲಕ್ಷ ರೂ. ಮೌಲ್ಯದ 300ಗ್ರಾಂ ಬಂಗಾರ, 4ಲಕ್ಷ ರೂ. ಮೌಲ್ಯದ 8ಕೆಜಿ ಬೆಳ್ಳಿಯಿದೆ. ರಟ್ಟೀಹಳ್ಳಿ ತಾಲೂಕಿನ ಯಲಿವಾಳ ಮತ್ತು ಬುಳ್ಳಾಪುರದಲ್ಲಿ ಸುಮಾರು 40ಎಕರೆ ಪಿತ್ರಾರ್ಜಿತ ಕೃಷಿ ಜಮೀನು ಹೊಂದಿದ್ದಾರೆ.
ಹಿರೇಕೆರೂರು ಬಿಜೆಪಿ ಅಭ್ಯರ್ಥಿ :
ಬಿ.ಸಿ.ಪಾಟೀಲ 8.58ಕೋಟಿ ರೂ. ಒಡೆಯರಾಗಿದ್ದಾರೆ. ಒಂದೂವರೆ ವರ್ಷದಲ್ಲಿ 2.5ಕೋಟಿ ರೂ.ಗಳಷ್ಟು ಆಸ್ತಿ ಹೆಚ್ಚಳವಾಗಿದೆ. 8.58ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿದ್ದಾರೆ. 2.04ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 4.55ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ವನಜಾ ಪಾಟೀಲ 78.46ಲಕ್ಷ ರೂ.ಗಳ ಮೌಲ್ಯದ ಚರಾಸ್ತಿ ಹಾಗೂ 1.20ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಬಿ.ಸಿ. ಪಾಟೀಲ ಅವರಲ್ಲಿ 60ಲಕ್ಷ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರಿದ್ದರೆ, ಪತ್ನಿ ಬಳಿ 40ಲಕ್ಷ ರೂ.ಗಳ ಮೌಲ್ಯದ ಬೆಂಜ್ ಕಾರಿದೆ. ಬುಲೆಟ್ ಬೈಕ್, ಟ್ರ್ಯಾಕ್ಟರ್ ಹೊಂದಿದ್ದಾರೆ. ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ವ್ಯಾಯಾಮ ಸಂಸ್ಥೆ(ಜಿಮ್)ಗೆ 35ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.
ಹಿರೇಕೆರೂರು ಕಾಂಗ್ರೆಸ್ ಅಭ್ಯರ್ಥಿ:
ಬಿ.ಎಚ್.ಬನ್ನಿಕೋಡ 1.35ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. 27.33ಲಕ್ಷ ರೂ. ಮೌಲ್ಯದ ಚರಾಸ್ತಿ, 78.10ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಬಸಮ್ಮ ಬಳಿ 71ಸಾವಿರ ರೂ. ಮೌಲ್ಯದ ಚರಾಸ್ತಿ, 12ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿಯಿದೆ. ಮಗ ಪ್ರಕಾಶ ಬಳಿ 15.34ಲಕ್ಷ ರೂ. ಮೌಲ್ಯದ ಚರಾಸ್ತಿ ಹಾಗೂ 2ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ.
ಬನ್ನಿಕೋಡ ಬಳಿ 2ಲಕ್ಷ ರೂ. ನಗದು, ಪತ್ನಿ ಬಳಿ 20ಸಾವಿರ ಹಾಗೂ ಮಗನ ಬಳಿ 50ಸಾವಿರ ರೂ. ನಗದು ಹಣವಿದೆ.12ಲಕ್ಷ ರೂ. ಮೌಲ್ಯದ 526ಗ್ರಾಂ ಬಂಗಾರವನ್ನು ಬನ್ನಿಕೋಡ ಹೊಂದಿದ್ದು, ಪತ್ನಿ ಬಳಿ 50ಸಾವಿರ ರೂ. ಮೌಲ್ಯದ 20ಗ್ರಾಂ ಬಂಗಾರವಿದೆ.