ಕರ್ನಾಟಕ

karnataka

ETV Bharat / state

ಬಿ.ಸಿ.ಪಾಟೀಲ್​​ ಮೇಲೆ 'ಕೈ' ನಾಯಕರು ಗರಂ: ಬೆಂಬಲ ನೀಡುವುದಾಗಿ ಬಣಕಾರ್​ ಘೋಷಣೆ​ - ಬಿಜೆಪಿ ಹೈಕಮಾಂಡ್​​​

ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಆಮಿಷಗಳಿಗೆ ಬಲಿಯಾಗಿ ಬಿಜೆಪಿ ಸೇರಲು ಮುಂದಾಗಿದ್ದಾರೆ. ಅಲ್ಲದೇ ಕಾರ್ಯಕರ್ತರಿಗೆ ರಾಜೀನಾಮೆ ಕುರಿತು ಒಂದು ಮಾತು ಹೇಳದೆ ಏಕವ್ಯಕ್ತಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಶಾಸಕ ಬಿ.ಸಿ.ಪಾಟೀಲ್

By

Published : Jul 30, 2019, 11:20 PM IST

ಹಾವೇರಿ:ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್​​ರನ್ನು ಸ್ಪೀಕರ್​ ರಮೇಶ್ ​ಕುಮಾರ್​​ ಶಾಸಕ ಸ್ಥಾನದಿಂದ ಅನರ್ಹಗೊಳಿಸುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿ.ಸಿ.ಪಾಟೀಲ್ ಶಾಸಕತ್ವಕ್ಕೆ ರಾಜೀನಾಮೆ ನೀಡಿರುವುದಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಜೆಡಿಎಸ್‌ನಿಂದ ಬಂದ ಪಾಟೀಲ್‌ರನ್ನ ಕಾಂಗ್ರೆಸ್ ಎರಡು ಬಾರಿ ಶಾಸಕರನ್ನಾಗಿ ಮಾಡಿದೆ. ಆದರೆ ಇದ್ಯಾವ ಕೃತಜ್ಞತೆ ಇಲ್ಲದೆ ಪಾಟೀಲ್ ಇದೀಗ ಆಮಿಷಗಳಿಗೆ ಬಲಿಯಾಗಿ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ. ಅಲ್ಲದೇ ಕಾರ್ಯಕರ್ತರಿಗೆ ರಾಜೀನಾಮೆ ಕುರಿತು ಒಂದು ಮಾತು ಹೇಳದೆ ಏಕವ್ಯಕ್ತಿ ನಿರ್ಧಾರ ಕೈಗೊಂಡಿದ್ದಾರೆ. ಈ ಬಾರಿ ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೋ ಸ್ಪರ್ಧಿಸಲಿ ಅವರಿಗೆ ತಕ್ಕಪಾಠ ಕಲಿಸುತ್ತೇವೆ ಎನ್ನುತ್ತಿದ್ದಾರೆ ಕಾಂಗ್ರೆಸ್ ಮುಖಂಡರು.

ಇನ್ನು ಕಾಂಗ್ರೆಸ್ ಪಾಳೆಯದಲ್ಲಿ ಈ ರೀತಿ ಅಭಿಪ್ರಾಯ ವ್ಯಕ್ತವಾದರೆ ಬಿಜೆಪಿಯ ಯು.ಬಿ.ಬಣಕಾರ್ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಮಾತುಗಳನ್ನ ತಳ್ಳಿಹಾಕಿರುವ ಬಿಜೆಪಿಯ ಯು.ಬಿ.ಬಣಕಾರ, ಬಿ.ಸಿ.ಪಾಟೀಲ್‌ರನ್ನ ಬಿಜೆಪಿ ಹೈಕಮಾಂಡ್​​​ ಕಣದಿಂದ ಇಳಿಸಿದರೇ, ತಾವು ಅವರನ್ನ ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಬಿ.ಸಿ. ಪಾಟೀಲ್​​ ಮೇಲೆ ಕೆಂಡಾಮಂಡಲರಾದ ಕಾಂಗ್ರೆಸ್​ ಮುಖಂಡರು

ಈಗಾಗಲೇ ಬಿ.ಸಿ.ಪಾಟೀಲ್ ಶಾಸಕತ್ವವವನ್ನ ರಮೇಶಕುಮಾರ್ ಅನರ್ಹಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮದು ಶಾಸಕರಿಲ್ಲದ ಕ್ಷೇತ್ರ ಎನ್ನುತ್ತಿದ್ದಾರೆ ಕಾಂಗ್ರೆಸ್ ಮುಖಂಡರು. ಜೆಡಿಎಸ್‌ನಿಂದ ಬಂದ ಪಾಟೀಲ್‌ರನ್ನ ಸ್ವೀಕರಿಸಿ ಮತ್ತೆ ಅವರನ್ನ ಶಾಸಕರನ್ನಾಗಿ ಮಾಡಿದ್ದೇವು. ಆದರೆ ಇದೀಗ ಆಮಿಷಗಳಿಗೆ ಬಲಿಯಾಗಿ ಸಚಿವ ಸ್ಥಾನಕ್ಕಾಗಿ ರಾಜೀನಾಮೆ ನೀಡಿರುವ ಬಿ.ಸಿ.ಪಾಟೀಲರನ್ನ ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎನ್ನುತ್ತಿದ್ದಾರೆ ಕಾಂಗ್ರೆಸ್ ಮುಖಂಡರು.

ABOUT THE AUTHOR

...view details