ಹಾವೇರಿ: ಜಿಲ್ಲೆಯಲ್ಲಿ ವರುಣನ ಅಬ್ಬರವೇನೋ ಕಡಿಮೆಯಾಗಿದೆ. ಆದರೆ ಈವರೆಗೆ ಸುರಿದ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿಹೋಗಿದೆ. ಮುಂಗಾರು ಅವಧಿಗೂ ಮುನ್ನ ಆರ್ಭಟಿಸಿ ನಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸಿತು ಎನ್ನುತ್ತಿದ್ದಾರೆ ರೈತರು.
ಕಳೆದ ವರ್ಷ ಮಳೆ ಬರುವುದು ನಿಧಾನವಾಗಿತ್ತು. ಮಳೆ ಜೋರಾಗಿ ಬಂದು ನೀರು ಜಮೀನಿಗೆ ನುಗ್ಗುವುದರೊಳಗೆ ಎರಡು ಬಾರಿ ಫಸಲು ಪಡೆದಿದ್ದೆವು. ಹಾಕಿದ ಬಂಡವಾಳದ ಜೊತೆಗೆ ಲಾಭವೂ ಕೈ ಸೇರಿತ್ತು. ಈ ವರ್ಷ ಫಸಲು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ನಿರಂತರ ಮಳೆ ಸುರಿದು ನದಿನೀರು ಮೆಣಸಿನಕಾಯಿ ಬೆಳೆದ ಜಮೀನಿಗೆ ನುಗ್ಗಿ, ಬೆಳೆ ನೀರಲ್ಲಿ ಕೊಳೆತು ಹೋಗಿದೆ ಎಂದು ರೈತರೊಬ್ಬರು ಅಳಲು ತೋಡಿಕೊಂಡರು.