ಕರ್ನಾಟಕ

karnataka

ETV Bharat / state

ಕೋಳಿವಾಡರ ಜಯಕ್ಕೆ ತಣ್ಣಿರೆರಚಿದ ಸುಪ್ರೀಂಕೋರ್ಟ್: ಬಿಜೆಪಿ ಟಿಕೆಟ್ ಬೇಗುದಿಗೆ ಬ್ರೇಕ್

ರಾಣೆಬೆನ್ನೂರು ನಗರದಲ್ಲಿ ಉಪಚುನಾವಣೆ ಘೋಷಣೆಯಾದ ಕೂಡಲೇ ರಾಜಕೀಯ ಚಟುವಟಿಕೆಗಳು ಪಾದರಸದಂತೆ ಎದ್ದವು. ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸಭೆ ಮೇಲೆ ಸಭೆ ಕರೆದು ಹಬ್ಬದಂತೆ ಆಚರಿಸಿದರೆ ಇತ್ತ ಬಿಜೆಪಿ ಮುಖಂಡರು ನಾನೇ ಅಭ್ಯರ್ಥಿ ಎಂಬ ಎದೆ ತಟ್ಟಿ ಹೇಳುತ್ತಿದ್ದರು. ಆದರೆ ಇವೆಲ್ಲ ಕಾರ್ಯಚಟುವಟಿಕೆಗಳಿಗೂ ಸುಪ್ರೀಂಕೋರ್ಟ್ ತಡೆ ನಾಯಕರ ನಿದ್ದೆಗೆಡಿಸಿದೆ.

ಕೋಳಿವಾಡರ ಜಯಕ್ಕೆ ತಣ್ಣಿರೆರಚಿದ ಸುಪ್ರೀಂಕೋರ್ಟ್

By

Published : Sep 27, 2019, 8:18 PM IST

ರಾಣೆಬೆನ್ನೂರು: ರಾಜ್ಯದ 15 ಕ್ಷೇತ್ರಕ್ಕೆ ನಿಗದಿಯಾಗಿದ್ದ ಉಪಚುನಾವಣೆಯನ್ನು ಸುಪ್ರೀಂಕೋರ್ಟ್ ತಡೆ ಹಿಡಿದ ಕಾರಣ ಅನರ್ಹ ಶಾಕಸರಿಗೆ ಖುಷಿಯಾದರೆ, ಗೆಲ್ಲುವ ಕುದರೆಗಳಿಗೆ ತಣ್ಣಿರೆರಚಿದಂತಾಗಿದೆ.

ಹೌದು ರಾಣೆಬೆನ್ನೂರು ನಗರದಲ್ಲಿ ಉಪಚುನಾವಣೆ ಘೋಷಣೆಯಾದ ಕೂಡಲೇ ರಾಜಕೀಯ ಚಟುವಟಿಕೆಗಳು ಪಾದರಸದಂತೆ ಎದ್ದವು. ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಸಭೆ ಮೇಲೆ ಸಭೆ ಕರೆದು ಹಬ್ಬದಂತೆ ಆಚರಿಸಿದರೆ ಇತ್ತ ಬಿಜೆಪಿ ಮುಖಂಡರು ನಾನೇ ಅಭ್ಯರ್ಥಿ ಎಂಬ ಎದೆ ತಟ್ಟಿ ಹೇಳುತ್ತಿದ್ದರು. ಆದರೆ ಇವೆಲ್ಲ ಕಾರ್ಯಚಟುವಟಿಕೆಗಳಿಗೂ ಸುಪ್ರೀಂಕೋರ್ಟ್ ತಡೆ ನಾಯಕರ ನಿದ್ದೆಗೆಡಿಸಿದೆ.

ಕೋಳಿವಾಡರ ಜಯದ ಹಾದಿ ಕಸಿದುಕೊಂಡ ಸುಪ್ರೀಂ..?

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಬಿ.ಕೋಳಿವಾಡರ ಚುನಾವಣೆ ಸಿದ್ದತೆ ಮಾಡಿಕೊಂಡು, ಟಿಕೆಟ್ ಪಕ್ಕಾ ಮಾಡಿಕೊಳ್ಳಲು ಬೆಂಗಳೂರಿಗೆ ಹೋಗಿದ್ದರು. ಸೋಮವಾರ ನಾಮಪತ್ರ ಸಲ್ಲಿಸಲು ಸಿದ್ದತೆ ಮಾಡಿಕೊಂಡ ಸಮಯದಲ್ಲಿ ಅತೃಪ್ತರು ಸುಪ್ರೀಂಕೋರ್ಟ್ ನಲ್ಲಿ ಉಪಚುನಾವಣೆ ತಡೆ ಹಿಡಿಸಿದ್ದಾರೆ. ಇದರಿಂದ ಗೆಲ್ಲುವ ಕುದುರೆಯಾಗಿದ್ದ ಕೋಳಿವಾಡರು ಇನ್ನೊಂದು ತಿಂಗಳು ಚುನಾವಣೆ ಬಗ್ಗೆ ಮಾತನಾಡದಂತಾಗಿದೆ.

ಬಿಜೆಪಿ ಟಿಕೆಟ್ ಬೇಗುದಿಗೆ ಬ್ರೇಕ್:

ರಾಣೆಬೆನ್ನೂರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಿಂದ ಟಿಕೆಟ್ ಹಂಚಿಕೆ ಗೊಂದಲ ಸಾಮಾನ್ಯವಾಗಿದೆ. ಹದಿನಾರು ಜನ ಆಕಾಂಕ್ಷಿಗಳ ನಡುವೆ ನಾನೊಬ್ಬನು ಟಿಕೆಟ್ ಆಕಾಂಕ್ಷಿ ಎಂದು ಹೇಳುತ್ತಿದ್ದರು. ಇನ್ನೂ ಬಿಜೆಪಿ ಟಿಕೆಟ್​ಗಾಗಿ ಸಾಮಾಜಿಕ ಜಾಲತಾಣದಲ್ಲಿ ನನಗೆ ಟಿಕೆಟ್, ನಾವೇ ಅಭ್ಯರ್ಥಿ ಎಂದು ಪೋಸ್ಟ್ ಹಾಕುತ್ತಿದ್ದ ಸುಪ್ರೀಂಕೋರ್ಟ್ ಪೋಸ್ಟ್ ಡಿಲಿಟ್ ಮಾಡುವಂತೆ ಮಾಡಿದೆ.

ಒಟ್ಟಿನಲ್ಲಿ ಚುನಾವಣೆ ಸಿದ್ದತೆ ನಡೆಸಿದ್ದ ಮುಖಂಡರಿಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ಬ್ರೇಕ್ ಹಾಕಿದ್ದು, ಮುಂದಿನ ತಿಂಗಳು 22 ರವರಗೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಮುಂದೆ ಸುಪ್ರೀಂಕೋರ್ಟ್ ನಿಂದ ಉಪಚುನಾವಣೆ ನಡೆಯಲಿದೆ ಎಂದು ತೀರ್ಪು ಬಂದರೆ, ಮತ್ತೆ ರಾಣೆಬೆನ್ನೂರುಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗುತ್ತವೆ ಎಂಬುದು ಮಾತ್ರ ಸತ್ಯ.

ABOUT THE AUTHOR

...view details