ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​​​​ ನಾಯಕರ ರಾಜೀನಾಮೆ ಕುರಿತು ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು?

ತಮ್ಮದೇ ಸರ್ಕಾರವಿಟ್ಟುಕೊಂಡು ಆ ಪಕ್ಷದ ಶಾಸಕರು ರಾಜೀನಾಮೆ ನೀಡುತ್ತಾರೆ ಎಂದರೆ ಇದೊಂದು ದೊಡ್ಡ ಅಘಾತಕಾರಿ ವಿಚಾರ. ಇನ್ನು ಏನೇ ಇದ್ದರು ಅತೃಪ್ತರ ನಡೆ ಯಾವ ಕಡೆ ಎಂಬುದನ್ನ ನೋಡಬೇಕು ಎಂದ ಬೊಮ್ಮಾಯಿ.

ಕಾಂಗ್ರೆಸ್​ ನಾಯಕರ ರಾಜೀನಾಮೆ ಕುರಿತು ಬಿಜೆಪಿ ನಾಯಕರ ಪ್ರತಿಕ್ರಿಯೆ

By

Published : Jul 1, 2019, 9:38 PM IST

ಹಾವೇರಿ: ತಮ್ಮ ರಾಜೀನಾಮೆಗೆ ಕಾರಣ ಏನು ಎಂಬುದುನ್ನ ಈಗಾಗಲೇ ಆನಂದ್​ ಸಿಂಗ್ ಹೇಳಿದ್ದಾರೆ. ಅವರು ರಾಜೀನಾಮೆ ನೀಡಲು ಜಿಂದಾಲ್​ಗೆ ಭೂಮಿ ಹಂಚಿಕೆ ಮತ್ತು ಇತರ ವಿಷಯಗಳಲ್ಲಿ ಸರ್ಕಾರದ ಬಗ್ಗೆ ಇದ್ದ ಅಸಮಾಧಾನ ಕಾರಣ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್​ ನಾಯಕರ ರಾಜೀನಾಮೆ ಕುರಿತು ಬಿಜೆಪಿ ನಾಯಕರ ಪ್ರತಿಕ್ರಿಯೆ

ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುವಿನಾಳದಲ್ಲಿ ಮಾತನಾಡಿದ ಅವರು, ಸರ್ಕಾರ ನಿಷ್ಕ್ರಿಯ ಮತ್ತು ಗೊಂದಲದ ಗೂಡಾಗಿದೆ. ತದ್ವಿರುದ್ಧ ಸಿದ್ಧಾಂತವಿರುವ ಎರಡು ಪಕ್ಷಗಳ ನಾಯಕರು ತಮ್ಮ ಅಧಿಕಾರದ ಆಸೆಗಾಗಿ ಸರ್ಕಾರ ರಚಿಸಿದ್ದಾರೆ. ಇದು ಈ ಪಕ್ಷದ ಶಾಸಕರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಹೀಗಾಗಿ ಈ ರೀತಿಯ ಅಸಮಾಧಾನದ ಹೊಗೆ ಕಾಣಿಸಿಕೊಳ್ಳುತ್ತೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

ಇಂತಹ ಸರ್ಕಾರದಿಂದ ತಾವು ಚುನಾವಣೆಗೆ ಹೋದರೆ ಪುನರಾಯ್ಕೆಯಾಗುವುದಿಲ್ಲ ಎಂಬುದು ಶಾಸಕರಿಗೆ ಮನವರಿಕೆಯಾಗಿದೆ. ಆನಂದ್​ ಸಿಂಗ್ ರಾಜೀನಾಮೆ ಬಿಜೆಪಿಗೆ ಪ್ಲಸ್ಸೂ ಅಲ್ಲಾ ಮೈನಸ್ಸು ಅಲ್ಲ. ಈ ಕುರಿತಂತೆ ಯಾವುದೇ ಅಸಮಾಧಾನಿತ ಶಾಸಕರು ತಮ್ಮ ಸಂಪರ್ಕದಲ್ಲಿಲ್ಲ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಎಂ.ಉದಾಸಿ, ಸಮ್ಮಿಶ್ರ ಸರ್ಕಾರದಲ್ಲಿ ಒಬ್ಬರಿಗೊಬ್ಬರ ಮೇಲೆ ವಿಶ್ವಾಸ ಕಾಣದಂತೆ ಪರಿಸ್ಥಿತಿ ಇರುವದರಿಂದ ಆನಂದ್​ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯಲ್ಲಿಂದು ಮಾತನಾಡಿದ ಅವರು, ಬಿಜೆಪಿ ಎಂದೂ ರಾಜೀನಾಮೆ ನೀಡಲಿ ಅಂತಾ ಆಪೇಕ್ಷೆ ಪಟ್ಟಿಲ್ಲ. ಅವರ ರಾಜೀನಾಮೆ ಅಂಗೀಕಾರವಾಗುವವರೆಗೆ ತಾವು ಮಾತನಾಡುವುದು ಅನಪೇಕ್ಷಿತ ಎಂದರು. ಈ ಕುರಿತಂತೆ ತಮ್ಮ ನಾಯಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಇದರ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಉದಾಸಿ ಹೇಳಿದರು.

For All Latest Updates

TAGGED:

ABOUT THE AUTHOR

...view details