ರಾಣೇಬೆನ್ನೂರು (ಹಾವೇರಿ) :ರಾಣೇಬೆನ್ನೂರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾನಗಲ್ ಕ್ಷೇತ್ರದ ಶಾಸಕ ಸಿ ಎಂ ಉದಾಸಿಯವರ ಮೃತದೇಹದ ಅಂತಿಮ ದರ್ಶನ ಪಡೆದರು.
ಪಕ್ಷಬೇಧ ಮರೆತು ಉದಾಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕಾರ್ಯಕರ್ತರು
ಹಾನಗಲ್ ಕ್ಷೇತ್ರದ ಶಾಸಕ ಸಿ ಎಂ ಉದಾಸಿಯವರು ನಿನ್ನೆ ಮೃತಪಟ್ಟಿದ್ದು, ಇಂದು ಪಾರ್ಥಿವ ಶರೀರವನ್ನು ರಾಣೇಬೆನ್ನೂರು ನಗರಕ್ಕೆ ತರಲಾಯಿತು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿದರು..
ಉದಾಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕಾರ್ಯಕರ್ತರು
ವಯೋಸಹಜ ಕಾಯಿಲೆಯಿಂದ ನಿನ್ನೆ ಬೆಂಗಳೂರಿನಲ್ಲಿ ಮೃತಪಟ್ಟ ಸಿ ಎಂ ಉದಾಸಿಯವರ ಪಾರ್ಥಿವ ಶರೀರವನ್ನು ಇಂದು ರಾಣೇಬೆನ್ನೂರು ಮಾರ್ಗವಾಗಿ ಸ್ವಕ್ಷೇತ್ರ ಹಾನಗಲ್ಗೆ ತೆಗೆದುಕೊಂಡು ಹೋಗಲಾಯಿತು.
ಈ ವೇಳೆ ಶಾಸಕ ಪೂಜಾರ, ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಬಿ ಹೆಚ್ಬನ್ನಿಕೋಡ, ಬಿಜೆಪಿ ಮುಖಂಡರಾದ ಬಸವರಾಜ ಕೇಲಗಾರ, ಸಂತೋಷ್ ಕುಮಾರ್ ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ಬಸವರಾಜ ಹುಲ್ಲತ್ತಿ, ವಿಶ್ವನಾಥ ಪಾಟೀಲ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು.