ಹಾವೇರಿ: ನವೆಂಬರ್ ಎರಡನೇ ವಾರದಲ್ಲಿ ಅಂತಿಮ ಹೋರಾಟವಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಉಗ್ರ ಹೋರಾಟ ನಡೆಸುವ ಒಳಗಾಗಿ ಸಿಎಂ ಬಸವರಾಜ ಬೊಮ್ಮಾಯಿ ನಮ್ಮ ಸಮಾಜಕ್ಕೆ ಸಿಹಿ ಸುದ್ದಿ ಕೊಡಬೇಕು.
ವಿಜಯದಶಮಿ ಅಥವಾ ದೀಪಾವಳಿ ಒಳಗಾಗಿ ನಮ್ಮ ಬೇಡಿಕೆ ಈಡೇರಿಸಬೇಕು. ಸಮಾಜದ ಜನರ ತಾಳ್ಮೆ ಪರೀಕ್ಷೆ ಮಾಡಬೇಡಿ. ಸಿಎಂ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಿದರೆ ಸವಣೂರು ಖಾರದಿಂದ ತುಲಾಭಾರ ಮಾಡುತ್ತೇವೆ, ಮಠದಲ್ಲಿ ಸಿಎಂ ಫೋಟೋ ಹಾಕುತ್ತೇವೆ ಎಂದು ತಿಳಿಸಿದರು.