ಹಾವೇರಿ: ನಾನು ಮಂತ್ರಿ ಸ್ಥಾನ ಸಿಗದ ಹಿನ್ನೆಲೆ ನಿಧನ ಆದೆ ಅಂತ ಉದಾಸಿಯವರು ಡಿಕೆಶಿಗೆ ವಿಲ್ ಬರೆದು ಕೊಟ್ಟಿದ್ದಾರಾ?. ಎಷ್ಟು ಅಪ್ರಬುದ್ಧ ಮಾತು?.
ಜನರನ್ನು ತಪ್ಪು ದಾರಿಗೆ ಎಳೆಯೋ ಕೆಲಸ ಮಾಡ್ತಿದ್ದಾರೆ ಎಂದು ಸಚಿವ ಬಿ. ಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹಾನಗಲ್ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸಚಿವ ಬಿ. ಸಿ ಪಾಟೀಲ್ ಹಾಗೂ ಎಸ್. ಟಿ ಸೋಮಶೇಖರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ನಂತರ ಈ ಕುರಿತು ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದವರಿಗೆ ಸೋಲಿನ ಭಯ ಕಾಡ್ತಿದೆ. ಜೆಡಿಎಸ್ ಪಕ್ಷದವರು ವೋಟ್ ತಗೊಂಡ್ರೆ ಕಾಂಗ್ರೆಸ್ ಸೋಲುತ್ತೆ ಅಂತಾರೆ ಸಿದ್ದರಾಮಯ್ಯ. ಹೀಗೆ ಅನ್ನೋಕೆ ಇವರು ಯಾರು? ಜೆಡಿಎಸ್ನವರು ಅವರ ಅಭ್ಯರ್ಥಿ ಹಾಕಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದವರಿಗೆ ಎಲ್ಲೋ ಒಂದು ಕಡೆ ಭಯ ಕಾಡ್ತಿದೆ ಎಂದರು.
ಕೇಸರಿ ಕಂಡರೆ ಅವರಿಗ್ಯಾಕೆ ಅಷ್ಟು ಭಯ?
ಪೊಲೀಸ್ ಅಧಿಕಾರಿಗಳು ಕೇಸರಿ ಶಾಲು ಧರಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು. ಧ್ವಜದಲ್ಲಿಯೂ ಕೇಸರಿ ಬಣ್ಣ ಇದೆ. ಕೇಸರಿ ಕಂಡರೆ ಅವರಿಗ್ಯಾಕೆ ಅಷ್ಟು ಭಯ? ಕಾಂಗ್ರೆಸ್ ಪಕ್ಷದವರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಮುಸ್ಲಿಂ ಕಾನ್ಸ್ಟೇಬಲ್ ಡ್ಯೂಟಿ ಮುಗಿದ ಮೇಲೆ ನಮಾಜ್ಗೆ ಹೋಗಬೇಕಿತ್ತು ಅಂದರೆ ಅವರು ಅವರ ಡ್ರೆಸ್ ಹಾಕ್ಕೊಂಡು ಹೋಗ್ತಾರೆ. ಸಿದ್ದರಾಮಯ್ಯ ನಾನೇನಾದರೂ ಸಿಎಂ ಆದರೆ ಮುಸ್ಲಿಂರಿಗೆ ಇಷ್ಟು ಕೋಟಿ ಕೊಡ್ತೀವಿ ಅಂತಾರೆ. ಹಿಂದೂಗಳಿಗೆ ಎಷ್ಟು ದುಡ್ಡು ಕೊಡ್ತೀರಿ ಹೇಳಿ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರೇ ಅಂತಹ ತರಬೇತಿ ಕೇಂದ್ರಗಳು ಎಲ್ಲಿವೆ ಹೇಳಿ?
ಆರ್ಎಸ್ಎಸ್ ಶಾಖೆಗಳಲ್ಲಿ ಬ್ಲೂ ಫಿಲಂ ನೋಡುವ ತರಬೇತಿ ಕೊಡ್ತಾರೆ ಎಂಬ ಮಾಜಿ ಸಿಎಂ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಅಂತಹ ತರಬೇತಿ ಕೇಂದ್ರಗಳು ಎಲ್ಲಿ ಇದೆ ಹೇಳಿ? ಆರ್ಎಸ್ಎಸ್ ರಾಷ್ಟ್ರಪ್ರೇಮದ ಬಗ್ಗೆ ತರಬೇತಿ ಕೊಡ್ತಾರೆ ಎಂದರು.
ನಳಿನ್ ಕುಮಾರ್ ಕಟೀಲ್ ಬಿಜೆಪಿ ಅಧ್ಯಕ್ಷರಾಗಲು ಯೋಗ್ಯರಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯೋಗ್ಯತೆ ಇರದಿದ್ದರೆ ಕಟೀಲ್ ಅಧ್ಯಕ್ಷರಾಗ್ತಿರಲಿಲ್ಲ. ವೈಯಕ್ತಿಕ ಟೀಕೆ ನಾನು ಮಾಡಲ್ಲ. ಕಾಂಗ್ರೆಸ್ಗೆ ರಾಷ್ಟ್ರೀಯ ಅಧ್ಯಕ್ಷರನ್ನೇ ಆಯ್ಕೆ ಮಾಡುವ ಶಕ್ತಿ ಇಲ್ಲ. ಸ್ವಂತ ಮಗನಿಗೆ ಅಧಿಕಾರ ಬಿಟ್ಟು ಕೊಡಲು ತಾಯಿ ಸಿದ್ದರಿಲ್ಲ. ರಾಹುಲ್ ಗಾಂಧಿ ಸರಿಯಾಗಿ ನಡೆಯುತ್ತಿಲ್ಲ ಅಂತಾ ಸೋನಿಯಾ ಗಾಂಧಿಯವರು ತಿಳಿದುಕೊಂಡಿರಬಹುದು ಎಂದು ತಿಳಿಸಿದರು.
ಪ್ರಧಾನಿ ಮೋದಿ ಆಗರ್ಭ ಶ್ರೀಮಂತ ಕುಟುಂಬದಿಂದ ಬಂದಿಲ್ಲ
ಪ್ರಧಾನಿ ಮೋದಿ ಹುಟ್ಟುತ್ತಲೇ ಚಿನ್ನದ ಸ್ಪೂನ್ ಇಟ್ಟುಕೊಂಡು ಹುಟ್ಟಿಲ್ಲ. ಆಗರ್ಭ ಶ್ರೀಮಂತ ಕುಟುಂಬದಿಂದ ಬಂದಿಲ್ಲ. ಬಡ ಕುಟುಂಬದಿಂದ ಬಂದವರು ಮೋದಿ. ರೇಶನ್ ಅಂಗಡಿಗೂ ಹೋಗಿದ್ದಾರೆ. ಸೀಮೆ ಎಣ್ಣೆನೂ ತಂದಿದ್ದಾರೆ. ಸೌದೆ ಒಲೆ ಅಂಟಿಸಿದ್ದಾರೆ. ಸೊಸೈಟಿಯಲ್ಲಿ ಕ್ಯೂ ನಿಂತು ಅಕ್ಕಿ, ಬೇಳೆ ಮತ್ತು ಸಕ್ಕರೆ ತಗೊಂಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಹೇಳಿಕೆಗೆ ಸಚಿವ ಮುನಿರತ್ನ ತಿರುಗೇಟು ನೀಡಿದರು.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸರ್ಕಾರಿ ದ್ಯಾಮನಕೊಪ್ಪ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ ಪರ ಪ್ರಚಾರದ ವೇಳೆ ಅವರು ಮಾತನಾಡಿದರು. ನಳಿನ್ ಕುಮಾರ್ ಕಟೀಲ್ ಒಬ್ಬ ಹುಚ್ಚ ಎಂಬ ಸುರ್ಜೇವಾಲಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಸಂದರ್ಭದಲ್ಲಿ ಯಾರು ಹುಚ್ಚರು ಅಂತಾರೋ?. ಯಾರು ಎಲ್ಲೆಲ್ಲಿ ಎಡುವುತ್ತಾರೋ? ಏನೇನು ಮಾತಾಡ್ತಾರೋ? ಎಲ್ಲಿ ಏನೇನ್ ಮಾಡ್ಕೋತಾರೋ?. ಅದಕ್ಕೆಲ್ಲ ಉತ್ತರ ಕೊಡೋಕೆ ಆಗುತ್ತಾ?. ಅದಕ್ಕೆ ಉತ್ತರ ಬೇಕಾ? ಎಂದು ಪ್ರಶ್ನಿಸಿದರು.
ಓದಿ:ದೇಶಕ್ಕೆ ಬರುವ ಒಟ್ಟು ಬಂಡವಾಳದಲ್ಲಿ ಶೇ. 75 ರಷ್ಟು ಕರ್ನಾಟಕಕ್ಕೆ: ಸಚಿವ ಅಶ್ವತ್ಥ್ ನಾರಾಯಣ