ರಾಣೆಬೆನ್ನೂರು: ಕಣ್ಣು ಇದ್ದು, ಎಲ್ಲವನ್ನೂ ತಿಳಿದ ಕೆಲವು ವಯಸ್ಕರು, ಹಿರಿಯರು ನಿತ್ಯವೂ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುತ್ತಾರೆ. ಆದರೆ, ದಿವ್ಯಾಂಗ ಮಕ್ಕಳು ಸಂಚಾರ ನಿಯಮಗಳು ಸಮಾಜಕ್ಕೆ ಎಷ್ಟು ಮುಖ್ಯ ಎಂಬುದನ್ನು ತಮ್ಮ ಜಾಥಾ ಮೂಲಕ ಪ್ರಚಾರ ಮಾಡುತ್ತಿದ್ದಾರೆ.
ರಾಣೆಬೆನ್ನೂರಿನಲ್ಲಿ ದಿವ್ಯಾಂಗ ಮಕ್ಕಳಿಂದ ಸಂಚಾರಿ ನಿಯಮಗಳ ಅರಿವು ಜಾಥಾ
ಸಂಚಾರ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ದುಬಾರಿ ದಂಡದ ನೂತನ ಕಾಯ್ದೆ ಜಾರಿಗೆ ತಂದಿದೆ. ಇದು ಜನಾಕ್ರೋಶಕ್ಕೆ ಗುರಿಯಾಗಿದ್ದು, ಇದರ ನಡುವೆ ಶಾಲಾ ಮತ್ತು ಸಂಘ ಸಂಸ್ಥೆಗಳ ದಿವ್ಯಾಂಗ ಮಕ್ಕಳು ಸಂಚಾರ ನಿಯಮಗಳ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.
blind children
ನಗರದಲ್ಲಿರುವ ಸೇವಾ ಅಂಧರ ಸಂಸ್ಥೆ ಹಾಗೂ ರೇಣುಕಾ ಯಲ್ಲಮ್ಮದೇವಿ ಕಿವುಡ ಮತ್ತು ಅಂಧ ಶಾಲೆಯ ಮಕ್ಕಳು ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮ ನಡಸಿದರು. ನಗರದ ಎಂ.ಜಿ ರಸ್ತೆಯಲ್ಲಿ ದಿವ್ಯಾಂಗ ಮಕ್ಕಳು ವಾಹನ ಸವಾರರಿಗೆ ರಸ್ತೆ ಸುರಕ್ಷತಾ ಬಗ್ಗೆ ಘೋಷಣೆಗಳನ್ನು ಕೂಗಿ ತಿಳವಳಿಕೆ ಮೂಡಿಸಿದರು. ಈ ಜಾಥಾ ಕಾರ್ಯಕ್ರಮಕ್ಕೆ ಸಂಚಾರಿ ಪೊಲೀಸರು ಕೂಡ ಸಹಭಾಗಿತ್ವ ನೀಡಿ ಮಕ್ಕಳಿಗೆ ಮತ್ತಷ್ಟು ಬಲ ತುಂಬಿದರು.