ರಾಣೆಬೆನ್ನೂರು:ರಾಜ್ಯ ಸರ್ಕಾರ ವಿಧಿಸಿರುವ ಸೆಸ್ ವಿರೋಧಿಸಿ ರಾಣೆಬೆನ್ನೂರು ಎಪಿಎಂಸಿ ವರ್ತಕರು ವ್ಯಾಪಾರ ವಹಿವಾಟು ಬಂದ್ ಮಾಡಿದ್ದಾರೆ.
ರಾಜ್ಯ ಸರ್ಕಾರ ವಿಧಿಸಿರುವ ಸೆಸ್ ಅನ್ನು ಹಿಂಪಡೆಯುವಂತೆ ಒತ್ತಾಯಿಸಿ ಇಂದಿನಿಂದ ರಾಣೆಬೆನ್ನೂರು ಎಪಿಎಂಸಿ ಬಂದ್ ಮಾಡಿದ ಕಾರಣ, ರೈತರ ಬೆಳೆಗಳ ಮಾರಾಟಕ್ಕೆ ಸಮಸ್ಯೆ ಉಂಟಾಗಿದೆ.
ರಾಣೆಬೆನ್ನೂರು ತಾಲೂಕಿನ ರೈತರು ಹಿಂಗಾರು ಸಮಯದಲ್ಲಿ ಬೆಳೆದ ಹತ್ತಿ, ಶೇಂಗಾ, ಮೆಕ್ಕೆಜೋಳವನ್ನು ಮಾರಾಟ ಮಾಡಲು ಮಾರುಕಟ್ಟೆ ಇಲ್ಲದ ಕಾರಣ ಇಂದು ಯಾವ ರೈತರೂ ಮಾರುಕಟ್ಟೆ ಕಡೆ ಮುಖ ಮಾಡಿಲ್ಲ.
ಎಪಿಎಂಸಿ ಬಂದ್ ಮಾಡಿದ ವರ್ತಕರು ಏನಿದು ಸಮಸ್ಯೆ...
ರಾಜ್ಯ ಸರ್ಕಾರ ಇತ್ತೀಚೆಗೆ ಮಾರುಕಟ್ಟೆ ನೀತಿಯನ್ನು ಜಾರಿಗೆ ತಂದಿದೆ. ಇದರಲ್ಲಿ ಎಪಿಎಂಸಿ ಹೊರಗಡೆ ವ್ಯಾಪಾರ-ವಹಿವಾಟು ಮಾಡುವ ವ್ಯಾಪಾರಸ್ಥರಿಗೆ ಯಾವುದೇ ರೀತಿಯ ಮಾರುಕಟ್ಟೆ ಸೆಸ್ ಇರುವುದಿಲ್ಲ. ಆದರೆ ಎಪಿಎಂಸಿ ವರ್ತಕರಿಗೆ ಮಾತ್ರ ಸೆಸ್ ಅನ್ವಯವಾಗಲಿದೆ.
ಇದರಿಂದ ಮಾರುಕಟ್ಟೆ ಅವಲಂಬಿಸಿರುವ ದಲ್ಲಾಳಿಗಳು, ಖರೀದಿದಾರರು, ಗುಮಾಸ್ತರು, ಹಮಾಲರು, ಶ್ರಮಿಕರು ಸೇರಿ ಒಟ್ಟು ಕರ್ನಾಟಕದಲ್ಲಿ ಸುಮಾರು 6 ರಿಂದ 7 ಲಕ್ಷ ಕುಟುಂಬಗಳು ಬೀದಿಗೆ ಬರಲಿವೆ ಎಂಬುದು ವರ್ತಕರ ಆರೋಪ.