ಕರ್ನಾಟಕ

karnataka

By

Published : Oct 29, 2020, 7:26 PM IST

ETV Bharat / state

ಹಾವೇರಿಯಲ್ಲಿ 45 ಹೊಸ ಕೊರೊನಾ ಪ್ರಕರಣಗಳು ಪತ್ತೆ: 50 ಜನ ಗುಣಮುಖ

ಹಾವೇರಿಯಲ್ಲಿಂದು 45 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 50 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,457ಕ್ಕೇರಿದೆ.

45 new corona cases found, 45 new corona cases found in Haveri, haveri corona news, Haveri corona report, 45 ಕೊರೊನಾ ಪ್ರಕರಣಗಳು ಪತ್ತೆ, ಹಾವೇರಿಯಲ್ಲಿ 45 ಹೊಸ ಕೊರೊನಾ ಪ್ರಕರಣಗಳು ಪತ್ತೆ, ಹಾವೇರಿ ಕೊರೊನಾ ವರದಿ, ಹಾವೇರಿ ಕೊರೊನಾ ಸುದ್ದಿ,
ಹಾವೇರಿಯಲ್ಲಿ 45 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಹಾವೇರಿ: ಜಿಲ್ಲೆಯಲ್ಲಿಂದು 45 ಜನರಿಗೆ ಕೊರೊನಾ ದೃಢಪಟ್ಟಿರುವುದಾಗಿ ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೋಂಕಿತರ ಸಂಖ್ಯೆ 10,457 ಕ್ಕೇರಿದಂತಾಗಿದೆ.

ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಗುರುವಾರ 50 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 03, ಹಾನಗಲ್ ಮತ್ತು ಹಾವೇರಿ ತಾಲೂಕಿನಲ್ಲಿ ತಲಾ 10, ಹಿರೇಕೆರೂರು ಮತ್ತು ಶಿಗ್ಗಾವಿ ತಾಲೂಕಿನಲ್ಲಿ ತಲಾ 04, ರಾಣೆಬೆನ್ನೂರು ತಾಲೂಕಿನಲ್ಲಿ 12, ಸವಣೂರು ತಾಲೂಕಿನಲ್ಲಿ 02 ಜನರು ಸೇರಿದಂತೆ ಒಟ್ಟು 45 ಜನರಿಗೆ ಕೊರೊನಾ ತಗುಲಿದೆ.

ಕೊರೊನಾದಿಂದ ವ್ಯಕ್ತಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 188 ಕ್ಕೇರಿದಂತಾಗಿದೆ. ಜಿಲ್ಲೆಯಲ್ಲಿ 222 ಜನ ಹೋಂ ಐಸೋಲೇಷನ್​ನಲ್ಲಿದ್ದು, 48 ಸೋಂಕಿತರು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details