ಕರ್ನಾಟಕ

karnataka

ETV Bharat / state

ಗ್ರಂಥಾಲಯಕ್ಕೆ ಕಾಯಕಲ್ಪ ಕಲ್ಪಿಸಲು ಮುಂದಾದ ಸರ್ಕಾರ, ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ: ಈಟಿವಿ ಭಾರತ ಇಂಪ್ಯಾಕ್ಟ್‌

ಹಾಸನದ ಕೇಂದ್ರ ಗ್ರಂಥಾಲಯದ ಹಳೆಯ ಕಟ್ಟಡಕ್ಕೆ ಪರ್ಯಾಯವಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

Hasana District library
ಗ್ರಂಥಾಲಯಕ್ಕೆ ಕಾಯಕಲ್ಪ ಕಲ್ಪಿಸಲು ಮುಂದಾದ ಸರ್ಕಾರ

By

Published : Dec 27, 2019, 10:19 AM IST

ಹಾಸನ: ನಗರದ ಗ್ರಂಥಾಲಯಕ್ಕೆ ಕಾಯಕಲ್ಪ ಕಲ್ಪಿಸಲು ಮುಂದಾಗಿರುವ ಸರ್ಕಾರ, ಇಲ್ಲಿರುವ ಹಳೆಯ ಕಟ್ಟಡಕ್ಕೆ ಪರ್ಯಾಯವಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

ನಗರದ ಹೃದಯ ಭಾಗದಲ್ಲಿರುವ ಜಿಲ್ಲಾ ಗ್ರಂಥಾಲಯದ ಅವ್ಯವಸ್ಥೆಗೆ ಓದುಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಮೂಲಸೌಕರ್ಯಗಳ ಸಮಸ್ಯೆಗಳ ಕೊರತೆಗೆ ನಲುಗಿದ್ದ ಈ ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಸಾವಿರಾರು ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲಾ ವಯೋಮಾನದವರು ಬರುತ್ತಾರೆ.ಆದರೆ, ಓದಲು ಕೊಠಡಿ ಸಮಸ್ಯೆ, ಪೂರಕ ವಾತಾವರಣ ಇಲ್ಲವಾಗಿತ್ತು. ಅಲ್ಲದೆ, ಪುಸ್ತಕಗಳ ಕೊರತೆಯೂ ಹೆಚ್ಚಿತ್ತು.

ಶಂಕುಸ್ಥಾಪನೆ ನೆರವೇರಿಸಿದ ಸಚಿವ ಮಾಧುಸ್ವಾಮಿ

ಇದನ್ನೂ ಓದಿ...ಪ್ರಾಚೀನ ಕೇಂದ್ರ ಗ್ರಂಥಾಲಯಕ್ಕಿಲ್ಲ ಅಭಿವೃದ್ಧಿ...ಶಾಪ ಹಾಕುತ್ತಿರುವ ಸ್ಪರ್ಧಾರ್ಥಿಗಳು

ಈ ಕುರಿತು 'ಈಟಿವಿ ಭಾರತ' 'ಪ್ರಾಚೀನ ಕೇಂದ್ರ ಗ್ರಂಥಾಲಯ ಅಭಿವೃದ್ಧಿ...ಶಾಪ ಹಾಕುತ್ತಿರುವ ಸ್ಪರ್ಧಾರ್ಥಿಗಳು' ಎಂಬ ವರದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಮೊದಲ ಹಂತವಾಗಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ.ಇದಕ್ಕಾಗಿ ₹ 4 ಕೋಟಿ ಅನುದಾನದಲ್ಲಿ ₹ 2 ಕೋಟಿ ಬಿಡುಗಡೆ ಮಾಡಲಾಗಿದೆ. ಓದುಗರ ಹಿತದೃಷ್ಟಿಯಿಂದ ಜಿಲ್ಲಾ ಗ್ರಂಥಾಲಯವನ್ನು‌ ಮೇಲ್ದರ್ಜೆಗೇರಿಸಲು ಸರ್ಕಾರ ಮುಂದಾಗಿರುವುದು ವಿದ್ಯಾರ್ಥಿಗಳಿಗೆ ಹಾಗೂ ಓದುಗರಿಗೆ ಸಂತಸ ತಂದಿದೆ.

ABOUT THE AUTHOR

...view details