ಹಾಸನ: SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಯಾವುದೇ ಕಾರಣಕ್ಕೂ ನಡೆಸಬಾರದು. ಬದಲಿಗೆ ಮಕ್ಕಳ ಹಿತದೃಷ್ಟಿಯಿಂದ ಅವರನ್ನು ಪರೀಕ್ಷೆಯಿಲ್ಲದೆ ಪಾಸ್ ಮಾಡಬೇಕು ಎಂದು ಕನ್ನಡ ಚಳುವಳಿ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
SSLC, PUC ಪರೀಕ್ಷೆ ನಡೆಸದೆ ಮಕ್ಕಳನ್ನು ಪಾಸ್ ಮಾಡಿ: ವಾಟಾಳ್ ನಾಗರಾಜ್ ಆಗ್ರಹ
10 ತಿಂಗಳ ಕಾಲ ಪಾಠ ಮಾಡುವ ಬದಲು 2 ತಿಂಗಳು ಪಾಠ ಮಾಡಿ ಪರೀಕ್ಷೆ ಬರೆಯಿರಿ ಎಂದ್ರೆ ಮಕ್ಕಳು ಏನು ಬರೆಯುತ್ತವೆ. ಹಾಗಾಗಿ ಅವರಿಗೆ ಪರೀಕ್ಷೆ ಇಲ್ಲದೇ ಪಾಸ್ ಮಾಡಬೇಕೆಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮಕ್ಕಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಎರಡು ವರ್ಷದಿಂದ ಕೋವಿಡ್ ಇದೆ. ಎಷ್ಟೋ ಮಂದಿ ಸಾಯುತ್ತಿದ್ದಾರೆ. ನಿಮಗೆ ಗಂಭೀರತೆ ಇಲ್ಲವಾ? ಪರೀಕ್ಷೆ ಮಾಡಿ ಮಕ್ಕಳನ್ನು ಸಾಯಿಸಬೇಕು ಎಂದು ಅಂದುಕೊಂಡಿದ್ದೀರಾ? 10 ತಿಂಗಳ ಪಾಠ ಮಾಡುವ ಬದಲು 2 ತಿಂಗಳು ಪಾಠ ಮಾಡಿ ಪರೀಕ್ಷೆ ಬರೆಯಿರಿ ಎಂದ್ರೆ ಮಕ್ಕಳು ಏನು ಬರೆಯುತ್ತವೆ. ಹಾಗಾಗಿ ಅವರಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಬೇಕೆಂದು ಆಗ್ರಹಿಸಿದರು.
ಇನ್ನು ಮಕ್ಕಳು ಪಾಠವಿಲ್ಲದೇ ಕತ್ತಲೆಯಲ್ಲಿ ಇದ್ದಾರೆ. ಮಕ್ಕಳು, ಶಿಕ್ಷಕರು, ಸಿಬ್ಬಂದಿ, ನೌಕರರರು ಸೇರಿ 15 ಲಕ್ಷ ಮಂದಿಯಿದ್ದಾರೆ. ಅವರ ಪರಿಸ್ಥಿತಿ ಏನಾಗಬೇಕು. ಹಾಗಾಗಿ ಜೂ. 1ರಂದು ರಾಜ್ಯದ ಮಕ್ಕಳು 12 ಗಂಟೆಯಿಂದ ಅರ್ಧ ಗಂಟೆ ಮನೆಯಲ್ಲಿಯೇ ಮೌನವಾಗಿ ಕುಳಿತು ಮೌನ ಪ್ರತಿಭಟನೆ ಮಾಡಿ ತಮ್ಮ ಮನೆಯ ವಿಡಿಯೋ ಚಿತ್ರಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಎಂದರು.