ಹಾಸನ:ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ನಗರದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಇದರಿಂದ ವಾಹನ ಸವಾರರು ಆತಂಕದಲ್ಲೇ ಸಂಚರಿಸಬೇಕಿದೆ.
ಮಳೆಯಿಂದಾಗಿ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನ ಸವಾರರ ಸರ್ಕಸ್
ಸತತವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದ ಸವಾರರು ಆತಂಕದಲ್ಲಿ ಸಂಚರಿಸಬೇಕಿದೆ. ಈಚೆಗೆ ಅಮೃತ ಯೋಜನೆ ಅಡಿ ಕಾಮಗಾರಿ ನಡೆಸಲಾಗಿತ್ತು.
ಮಳೆಯಿಂದಾಗಿ ಗುಂಡಿ ಬಿದ್ದ ರಸ್ತೆ
ಅಮೃತ ಯೋಜನೆ ಅಡಿ ನಗರದ ನಿವಾಸಿಗಳಿಗೆ ನೀರು ಒದಗಿಸಲು ಕಾಮಗಾರಿ ನಡೆಸಲಾಗಿತ್ತು. ಆದರೆ, ಕಾಮಗಾರಿ ನಂತರ ಸುರಿದ ಮಳೆಯಿಂದ ಕಾಮಗಾರಿ ಮಾಡಿದ ರಸ್ತೆಗಳಲ್ಲಿ ಮಣ್ಣು ಕುಸಿದು ಗುಂಡಿ ಬೀಳುತ್ತಿವೆ.
ನಿತ್ಯ ಅನೇಕ ವಾಹನಗಳು ಅಪಾಯದಲ್ಲಿ ಸಂಚರಿಸುತ್ತಿವೆ. ಈಚೆಗೆ ಕೆಲವು ವಾಹನಗಳು ಗುಂಡಿಯಲ್ಲಿ ಸಿಲುಕಿದ್ದು, ಸ್ಥಳೀಯರ ಸಹಾಯದಿಂದ ಮೇಲಕ್ಕೆತ್ತಲಾಗಿತ್ತು. ಲಾಕ್ಡೌನ್ ಹಿನ್ನೆಲೆ ಒಂದು ತಿಂಗಳಿನಿಂದ ರಸ್ತೆ ಕಾಮಗಾರಿಗಳು ಸೇರಿದಂತೆ ಎಲ್ಲಾ ಕೆಲಸಗಳು ಹಾಗೇ ನಿಂತಿವೆ.