ಹಾಸನ:ಬಹುಜನ ಕ್ರಾಂತಿ ಮೋರ್ಚಾದಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಗೆ ಬೆಂಬಲಿಸಲು ಫೆ6ರ ಬೆಳಿಗ್ಗೆ 10.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ದಲಿತ-ಅಲ್ಪಸಂಖ್ಯಾತರ ವೇದಿಕೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಶೀರ್ ಅಹಮದ್ ತಿಳಿಸಿದ್ದಾರೆ.
ಪರಿವರ್ತನಾ ಯಾತ್ರೆ ಬೆಂಬಲಿಸಿ ಫೆ.6ರಂದು ಕಾರ್ಯಕ್ರಮ
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಗೆ ಬೆಂಬಲಿಸಲು ಫೆ.6ರ ಬೆಳಿಗ್ಗೆ 10.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ದಲಿತ-ಅಲ್ಪಸಂಖ್ಯಾತರ ವೇದಿಕೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾನವ ಹಕ್ಕು ವೇದಿಕೆ ಸದಸ್ಯ ಮರಿಜೋಸೆಪ್, ಅಸಾಂವಿಧಾನಿಕ ಎನ್ಆರ್ಸಿ ಮತ್ತು ಸಿಎಎ ಕೈಬಿಡಬೇಕು. ಇವಿಎಂ ಬದಲು ಬ್ಯಾಲೆಟ್ ಪೇಪರ್ ಪದ್ಧತಿ ಜಾರಿಗೆ ತರಬೇಕು. ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ, ಬೌದ್ಧ, ಸಿಖ್, ಕ್ರೈಸ್ತ ಹಾಗೂ ಲಿಂಗಾಯುತ ಸಮುದಾಯದ ಜನರ ಸಂರಕ್ಷಣೆಗಾಗಿ ಕಾಯ್ದೆ ಜಾರಿ ಮಾಡಬೇಕು ಹಾಗೂ ಎಸ್ಸಿ, ಎಸ್‌ಟಿ ಮತ್ತು ಓಬಿಸಿಗಳಿಗೆ ಖಾಸಗಿ ಕ್ಷೇತ್ರಗಳಲ್ಲಿ ಮೀಸಲಾತಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಬ್ಯಾಲೆಟ್ ಪೇಪರ್ನ ಚುನಾವಣೆ ನಡೆದರೇ ಅರ್ಹರು ಗೆಲ್ಲುತ್ತಾರೆ. ಇವಿಎಂನಿಂದ ಪ್ರಜಾಪ್ರಭುತ್ವದ ಬುನಾದಿಯಾದ ಪ್ರತಿ ನಾಗರಿಕರಿಗೆ ಸಂವಿಧಾನ ನೀಡಿರುವ ಮತದಾನದ ಹಕ್ಕಿನ ನಂಬಿಕೆ ಕಳೆದುಕೊಂಡಂತಾಗುತ್ತದೆ. ನಿಷ್ಪಕ್ಷಪಾತವಾಗಿ ಮತದಾನ ನಡೆಯಲು ಬ್ಯಾಲೆಟ್ ಪೇಪರ್ ಬಳಕೆಯ ಚುನಾವಣೆ ನಡೆಯಬೇಕು. ಹೀಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿ ರಾಷ್ಟ್ರವ್ಯಾಪಿ ಪರಿವರ್ತನಾ ಯಾತ್ರೆಯ ಮುಖ್ಯ ಬೇಡಿಕೆಗಳನ್ನ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.