ಕರ್ನಾಟಕ

karnataka

ETV Bharat / state

ಸೊಸೆಯ ಮೇಲೆ ಅತ್ಯಾಚಾರ : ಪೊಲೀಸರ ಅತಿಥಿಯಾದ ಕಾಮುಕ ಮಾವ - ಹಾಸನದಲ್ಲಿ ಅತ್ಯಾಚಾರ ಪ್ರಕರಣ

ಬೇಲೂರು ತಾಲೂಕಿನಲ್ಲಿ ಮಾವನೇ ತನ್ನ ಸೊಸೆಯ ಮೇಲೆ ಅತ್ಯಾಚಾರವೆಸಗಿದ್ದನು. ಸಂತ್ರಸ್ತೆಯ ಹೇಳಿಕೆ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಮಾವ
Accused

By

Published : Feb 10, 2021, 7:18 AM IST

ಹಾಸನ: ಸೊಸೆಯ ಮೇಲೆ ಮಾವನೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣ ಸಂಬಂಧ ಮಾಹಿತಿ ನೀಡಿದ ಹಾಸನ ಎಸ್ಪಿ

ವೆಂಕಟೇಶ್ ಜೋಗಿ ಬಂಧಿತ ಆರೋಪಿ. ಜ.13ರಂದು ಸಂಕ್ರಾಂತಿ ಹಬ್ಬಕ್ಕೆ ತನ್ನ ತವರು ಮನೆಗೆ ಹೊರಟಿದ್ದ ಸೊಸೆ ಮೇಲೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ. ಇದರಿಂದ ನೊಂದ ಸಂತ್ರಸ್ತೆ, ಆತ್ಮಹತ್ಯೆಗೆ ಯತ್ನಿಸಿದ್ದಳು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಈಕೆ, ಹೆಚ್ಚಿನ ಚಿಕಿತ್ಸೆಗೆ ಸ್ಪಂದಿಸದೆ ಫೆ.08 ರಂದು ಕೊನೆಯುಸಿರೆಳೆದಿದ್ದಾಳೆ.

ಓದಿ: 500 ಕೋಟಿ ರೂ. ಆಸ್ತಿಗಾಗಿ ನಡೆಯಿತೇ ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ಹತ್ಯೆ?

ಸಾಯುವ ಮುನ್ನ ಆಕೆ ತನಗೆ ಅನ್ಯಾಯವಾಗಿದೆ. ಸ್ವತಃ ನನ್ನ ಮಾವನೇ ನನ್ನ ಮೇಲೆ ಅತ್ಯಾಚಾರವೆಸಗಿದ್ದು, ಇದರಿಂದ ನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೆ ಎಂದು ಹೇಳಿಕೆ ನೀಡಿದ್ದಳು. ಇದರ ಆಧಾರದ ಮೇಲೆ ಆರೋಪಿ ವೆಂಕಟೇಶ್ ಜೋಗಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ABOUT THE AUTHOR

...view details