ಕರ್ನಾಟಕ

karnataka

ETV Bharat / state

ಪೋಷಕರು ಹೆಚ್ಚಿನ ಆಸಕ್ತಿಯನ್ನು ಮಕ್ಕಳ ಮೇಲೆ ತೋರಬೇಕು: ಶಾಸಕ ಹೆಚ್.ಕೆ ಕುಮಾರಸ್ವಾಮಿ - ಆನ್​​ಲೈನ್ ಶಿಕ್ಷಣ ತರಬೇತಿ ಕಾರ್ಯಕ್ರಮ

ಸಕಲೇಶಪುರ ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಕ್ಕಳಿಗಾಗಿ ಚಂದನ ಟಿವಿಯಲ್ಲಿ ಬರುವ ಆನ್​​ಲೈನ್ ಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ಶಾಸಕ ಹೆಚ್.ಕೆ ಕುಮಾರಸ್ವಾಮಿ ಉದ್ಘಾಟಿಸಿದರು.

Sakleshpur
ಬಾಗೆ ಗ್ರಾಮ ಪಂಚಾಯತಿ ಸಭಾಂಗಣ

By

Published : Aug 3, 2020, 10:47 PM IST

ಸಕಲೇಶಪುರ: ಮಕ್ಕಳು ಸರಿಯಾದ ರೀತಿಯಲ್ಲಿ ಶಿಕ್ಷಣ ಪಡೆಯಲು ಪೋಷಕರು ಹೆಚ್ಚಿನ ಆಸಕ್ತಿಯನ್ನು ಮಕ್ಕಳ ಮೇಲೆ ತೋರಬೇಕು ಎಂದು ಶಾಸಕ ಹೆಚ್.ಕೆ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಕ್ಕಳಿಗಾಗಿ ಚಂದನ ಟಿವಿಯಲ್ಲಿ ಬರುವ ಆನ್​​ಲೈನ್ ಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕೋವಿಡ್-19 ಹಿನ್ನೆಲೆಯಲ್ಲಿ ನೇರವಾಗಿ ತರಗತಿಗಳು ಶಾಲೆಯಲ್ಲಿ ನಡೆಯದಿರುವುದರಿಂದ ಆನ್​ಲೈನ್ ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೆ ಗ್ರಾಮೀಣ ಮಲೆನಾಡು ಭಾಗದಲ್ಲಿ ಹಲವೆಡೆ ಇಂಟರ್‌ನೆಟ್ ಸಿಗುವುದಿಲ್ಲ. ಜೊತೆಗೆ ಮೊಬೈಲ್ ನೆಟ್​​ವರ್ಕ್ ಸಹ ಸರಿಯಾಗಿ ಸಿಗುವುದಿಲ್ಲ, ಹಲವು ತಾಂತ್ರಿಕ ತೊಂದರೆಗಳು ಉದ್ಭವಿಸುವುದರಿಂದ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣ ಪಡೆಯಲು ಕಷ್ಟಕರವಾಗಿದೆ ಎಂದರು.

ಬಡ ಮಕ್ಕಳಲ್ಲಿ ಆನ್​​ಲೈನ್ ಶಿಕ್ಷಣಕ್ಕಾಗಿ ಸಂಪರ್ಕ ಸಾಧನಗಳು ಇರುವುದಿಲ್ಲ. ಸರ್ಕಾರ ಆನ್​​ಲೈನ್ ಶಾಲೆಗಳನ್ನು ಮಾಡಿದರೆ ಶಾಲೆಗಳಿಗೆ ದೊಡ್ಡ ದೊಡ್ಡ ಟಿವಿಗಳನ್ನು ನೀಡಬೇಕು ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಕೇವಲ ಆನ್‌ಲೈನ್ ಮಾದರಿಯನ್ನು ಮಾತ್ರ ಪ್ರೋತ್ಸಾಹಿಸದೆ ಬೇರೆ ಬೇರೆ ವಿಧಾನಗಳಲ್ಲಿ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಶಾಸಕ ಹೆಚ್.ಕೆ ಕುಮಾರಸ್ವಾಮಿ

ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್. ಹರೀಶ್ ಮಾತನಾಡಿ, 3ನೇ ತರಗತಿಯಿಂದ 10 ನೇ ತರಗತಿಯವರೆಗೆ ಚಂದನ ವಾಹಿನಿ ಮೂಲಕ ಶೈಕ್ಷಣಿಕ ಕಾರ್ಯಕ್ರಮ ಬಿತ್ತರವಾಗುತ್ತಿದೆ. ಪ್ರತಿ ತರಗತಿಗಳಿಗೆ ಬೇರೆ ಬೇರೆ ಅವಧಿಯಲ್ಲಿ ಶಿಕ್ಷಣ ನೀಡಲಾಗುತ್ತದೆ. ಯಾವ ವಿದ್ಯಾರ್ಥಿಗಳ ಮನೆಗಳಲ್ಲಿ ಟಿವಿ ಸೌಲಭ್ಯ ಇರುವುದಿಲ್ಲವೋ ಅಂತಹ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿಗೆ ಬಂದು ಆನ್‌ಲೈನ್ ಶಿಕ್ಷಣ ಪಡೆಯಬಹುದು. ಇಲ್ಲಿ ಕೋವಿಡ್ ಹರಡದಂತೆ ಸಾಮಾಜಿಕ ಅಂತರ, ಮಾಸ್ಕ್​, ಸ್ಯಾನಿಟೈಸರ್ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರು, ವಿದ್ಯಾರ್ಥಿಗಳ ಜೊತೆ ಆನ್​​ಲೈನ್ ಶಿಕ್ಷಣ ವೀಕ್ಷಿಸಿದರು. ವಿದ್ಯಾರ್ಥಿಗಳಿಗೆ ನೋಟ್​​ಬುಕ್ ಹಾಗೂ ಪೆನ್ ಪಂಚಾಯಿತಿ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ತಾ.ಪಂ ಉಪಾಧ್ಯಕ್ಷ ಕೃಷ್ಣೇಗೌಡ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್, ಉಪತಹಶೀಲ್ದಾರ್ ನಾಗರಾಜ್, ಕಾರ್ಯದರ್ಶಿ ಮೋನಪ್ಪ ಸೇರಿದಂತೆ ಇತರರು ಹಾಜರಿದ್ದರು.

ABOUT THE AUTHOR

...view details