ಸಕಲೇಶಪುರ (ಹಾಸನ):ಪಟ್ಟಣದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಸಮ-ಬೆಸ ನಿಯಮದಂತೆ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ದಿನಸಿ ಅಂಗಡಿ ಹಾಗೂ ಮಾಂಸದ ಅಂಗಡಿಗಳಿಗೆ ಈ ನಿಯಮವಿಲ್ಲದೇ ವ್ಯಾಪಾರ ನಡೆಸಲು ಅವಕಾಶ ನೀಡಲಾಯಿತು.
ದಿನಸಿ, ಮಾಂಸದಂಗಡಿಗಳಿಗಿಲ್ಲ ಯಾವುದೇ ಅಡೆತಡೆ..
ಬೆಳಗ್ಗೆ 8 ರಿಂದ 12 ಗಂಟೆವರೆಗೂ ಲಾಕ್ಡೌನ್ ಸಡಿಸಲಾಗಿತ್ತು. ಆದರೆ, ಜನ ಸಂಚಾರ ಕೊಂಚ ಕಡಿಮೆ ಇತ್ತು.
ಮಾಂಸ ಪ್ರಿಯರಿಗೆ ಸಿಹಿ ಸುದ್ದಿ
ಇದರಿಂದ ಭಾನುವಾರ ಮಧ್ಯಾಹ್ನ 12 ಗಂಟೆವರೆಗೆ ಮಾಂಸ ಪ್ರಿಯರು ಚಿಕನ್, ಮಟನ್ ಹಾಗೂ ಮೀನು ಖರೀದಿಸಿದರು. ಆದರೆ, ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಸೂಚಿಸಿದ್ದರು.
ಅದರಂತೆ ಎಲ್ಲ ಕಡೆ ಸಾಮಾಜಿಕ ಅಂತರದಲ್ಲಿ ವಹಿವಾಟು ನಡೆಯಿತು. ಬೆಳಗ್ಗೆ 8 ರಿಂದ 12 ಗಂಟೆವರೆಗೂ ಲಾಕ್ಡೌನ್ ಸಡಿಸಲಾಗಿತ್ತು. ಆದರೆ, ಜನ ಸಂಚಾರ ಕೊಂಚ ಕಡಿಮೆ ಇತ್ತು.