ಕರ್ನಾಟಕ

karnataka

ETV Bharat / state

ನೂತನ ಪರವಾನಗಿ ನಿಯಮ ಖಂಡಿಸಿ ಪಂಚಾಯಿತಿಗೆ ಮುತ್ತಿಗೆ ಹಾಕಿದ ವರ್ತಕರು - protest against new licensing rules

'ನೂತನ ನಿಯಮದ ಪ್ರಕಾರ ಕಟ್ಟಡ ಮಾಲೀಕರ ಸ್ಥಳದ ಈ - ಸ್ವತ್ತು ಹಾಗೂ ವರ್ತಕರಿಂದ 20 ರೂ.ಗಳ ಛಾಪಾ ಕಾಗದವನ್ನು ನೀಡಬೇಕು ಎಂದು ಇಲ್ಲಿನ ಪಿಡಿಒ ಹೇಳುತ್ತಿದ್ದಾರೆ. ಇದು ವರ್ತಕರಿಗೆ ಅನಾನುಕೂಲವಾಗುವುದರಿಂದ ಹಿಂದೆ ಇದ್ದ ನಿಯಮದಂತೆ ಪರವಾನಗಿ ನೀಡಬೇಕು'

merchants protest against new licensing rules
ನೂತನ ಪರವಾನಿಗೆ ನಿಯಮ ಖಂಡಿಸಿ ಪಂಚಾಯಿತಿಗೆ ಮುತ್ತಿಗೆ ಹಾಕಿದ ವರ್ತಕರು

By

Published : Oct 3, 2020, 7:45 PM IST

ಸಕಲೇಶಪುರ:ವ್ಯಾಪಾರ ವಹಿವಾಟು ನಡೆಸಲು ಅಂಗಡಿಗಳಿಗೆ ನೀಡುವ ಪರವಾನಗಿ ವಿಷಯದಲ್ಲಿ ನೂತನ ನಿಯಮಗಳನ್ನು ಜಾರಿಗೊಳಿಸಿರುವುದರ ವಿರುದ್ಧ ವರ್ತಕರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ತಾಲೂಕಿನ ಬಾಳ್ಳುಪೇಟೆ ಗ್ರಾಮದ ವರ್ತಕರ ಸಂಘದ ಸದಸ್ಯರು ಶನಿವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು. ವ್ಯಾಪಾರೋದ್ಯಮ ನಡೆಸಲು ಹಿಂದೆ ಇದ್ದ ನಿಯಮಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ವರ್ತಕರು ಈ ವೇಳೆ ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ವರ್ತಕರ ಸಂಘದ ಅಧ್ಯಕ್ಷ ಬಿಎನ್ ನಾಗೇಂದ್ರ, ಇಷ್ಟು ವರ್ಷಗಳ ಕಾಲ ವರ್ತಕರಿಗೆ ವ್ಯಾಪಾರ ವಹಿವಾಟು ನಡೆಸಲು ವ್ಯಾಪಾರ ನಡೆಸುವ ಕಟ್ಟಡದ ಮಾಲೀಕರಿಂದ ಕರಾರು ಪತ್ರ ಹಾಗೂ ವ್ಯಾಪಾರ ನಡೆಸುವ ವರ್ತಕರಿಂದ ಗುರುತಿನ ಚೀಟಿ ಪಡೆದು ಪರವಾನಗಿ ನೀಡುತ್ತಿದ್ದರು. ಆದರೆ, ನೂತನ ನಿಯಮದ ಪ್ರಕಾರ ಕಟ್ಟಡ ಮಾಲೀಕರ ಸ್ಥಳದ ಈ-ಸ್ವತ್ತು ಹಾಗೂ ವರ್ತಕರಿಂದ 20 ರೂ.ಗಳ ಛಾಪಾ ಕಾಗದವನ್ನು ನೀಡಬೇಕೆಂದು ಇಲ್ಲಿನ ಪಿಡಿಒ ಹೇಳುತ್ತಿದ್ದಾರೆ. ಇದು ವರ್ತಕರಿಗೆ ಅನಾನುಕೂಲವಾಗುವುದರಿಂದ ಹಿಂದೆ ಇದ್ದ ನಿಯಮದಂತೆ ಪರವಾನಗಿ ನೀಡಬೇಕು ಎಂದು ಒತ್ತಾಯಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಭಾ ಮಾತನಾಡಿ, ನಾವುಗಳು ಯಾವುದೇ ಹೊಸ ನಿಯಮವನ್ನು ಜಾರಿಗೆ ತಂದಿಲ್ಲ, ಹಿಂದೆ ಕೈಬರಹದಲ್ಲಿ ಪರವಾನಗಿ ಪತ್ರ ವಿತರಿಸಲಾಗುತ್ತಿತ್ತು. ಆದರೆ, ಸರ್ಕಾರ ಇದೀಗ ಆನ್​ಲೈನ್​ ಪರವಾನಿಗೆ ಪತ್ರ ನೀಡುವ ನಿಯಮ ಜಾರಿಗೊಳಿಸಿದ್ದರಿಂದ ಕೆಲವೊಂದು ದಾಖಲಾತಿಗಳನ್ನು ವರ್ತಕರು ಸಲ್ಲಿಸಬೇಕಾಗಿದೆ . ಕೃಷಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಆದ್ದರಿಂದ, ವರ್ತಕರಿಂದ ಸ್ಥಳದ ಈ-ಸ್ವತ್ತು ಪಡೆದು ಪರಿಶೀಲನೆ ಮಾಡಿ ಪರವಾನಗಿ ಪತ್ರವನ್ನು ನೀಡಲಾಗುತ್ತದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವರ್ತಕರ ಸಂಘದ ಉಪಾಧ್ಯಕ್ಷ ವೆಂಕಟೇಶ್​, ಸಾಲ ನೀಡುವುದು ಬ್ಯಾಂಕಿನವರ ವಿವೇಚನೆಗೆ ಬಿಟ್ಟಿದ್ದು, ನಮ್ಮ ವೈಯಕ್ತಿಕವಾದ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಸಾಲ ನೀಡುತ್ತಾರೆ. ಅದಕ್ಕೆ ನಿಮಗೇಕೆ ಬಾಂಡ್ ಪೇಪರ್ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೂತನ ಪರವಾನಗಿ ನಿಯಮ ಖಂಡಿಸಿ ಪಂಚಾಯಿತಿಗೆ ಮುತ್ತಿಗೆ ಹಾಕಿದ ವರ್ತಕರು

ಪ್ರತಿಭಟನೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಕೆ.ಎನ್ ಚಂದ್ರಶೇಖರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ವೇಳೆ ಪಂಚಾಯಿತಿ ಆಡಳಿತ ಅಧಿಕಾರಿ ಉಳ್ಳಾಗಡ್ಡಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶೇಖರ್, ವರ್ತಕರ ಸಂಘದ ಕಾರ್ಯದರ್ಶಿ ಭೋಗರಾಜ್, ಖಜಾಂಚಿ ಎಂ ಎಸ್ ಶಿವಕುಮಾರ್ ಸೇರಿದಂತೆ ಇನ್ನಿತರರು ಇದ್ದರು.

ABOUT THE AUTHOR

...view details