ಹಾಸನ:ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಮನೆಯ ಕಾಂಪೌಂಡ್‌ವೊಳಗೆ ನುಗ್ಗಿ ಸಾಕು ನಾಯಿಯನ್ನು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಧ್ಯರಾತ್ರಿ 2.38ರ ಸಮಯದಲ್ಲಿ ಮಲ್ಲೇಗೌಡ ಎಂಬುವವರ ಮನೆಯ ಬಳಿ ಬಂದ ಚಿರತೆ ಸುತ್ತಮುತ್ತ ಒಂದು ರೌಂಡ್ ಹಾಕಿದೆ.
ಮನೆ ಕಾಂಪೌಂಡ್ ಒಳನುಗ್ಗಿ ಸಾಕು ನಾಯಿ ಹೊತ್ತೊಯ್ದ ಚಿರತೆ: ವಿಡಿಯೋ - Leopard attack on dog in Hassan
ರಾತ್ರಿ ವೇಳೆ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಮನೆಯ ಕಾಂಪೌಂಡ್ ಒಳಗೆ ನುಗ್ಗಿ ಸಾಕು ನಾಯಿಯನ್ನು ಹೊತ್ತೊಯ್ದಿದೆ.
ಸಾಕು ನಾಯಿ ಹೊತ್ತೊಯ್ದ ಚಿರತೆ
ಬಳಿಕ ಕಾಂಪೌಂಡ್‌ನೊಳಗೆ ನಾಯಿ ಇರುವುದನ್ನು ಗಮನಿಸಿದ ಚಿರತೆ, ಒಳಗೆ ಜಿಗಿದು ನಾಯಿಯ ಕುತ್ತಿಗೆ ಬಾಯಿ ಹಾಕಿ ಎಳೆದೊಯ್ದಿದೆ. ಮುಂಜಾನೆ ನಾಯಿ ಕಾಣದಿರುವ ಹಿನ್ನೆಲೆಯಲ್ಲಿ ಮನೆಯವರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕಾಡುಕೋಣದ ಜೊತೆ ಕಾದಾಡಿ ಮೃತಪಟ್ಟ ಹೆಣ್ಣು ಹುಲಿ...!