ಹಾಸನ: ಆಕಸ್ಮಿಕವಾಗಿ ಬಂದ ಶಾಸಕನ ತಾಕತ್ತು ಏನು ಎಂಬುದನ್ನು ಗ್ರಾಪಂ ಚುನಾವಣೆ ಫಲಿತಾಂಶವನ್ನು ಕೊಡುವ ಮೂಲಕ ಹಾಸನ ಜನರೇ ತೋರಿಸಿದ್ದಾರೆ ಎಂದು ಶಾಸಕ ಪ್ರೀತಂ ಜೆ.ಗೌಡ, ಮಾಜಿ ಸಚಿವ ರೇವಣ್ಣಗೆ ತಿರುಗೇಟು ನೀಡಿದರು.
ಆಕಸ್ಮಿಕ ಶಾಸಕ ಎಂದು ಜರಿಯುತ್ತಿದ್ದವರಿಗೆ ಹಾಸನ ಜನರೇ ಉತ್ತರ ಕೊಟ್ಟಿದ್ದಾರೆ: ಪ್ರೀತಂ ಗೌಡ
ಹಾಸನ ವಿಧಾನಸಭಾ ಕ್ಷೇತ್ರದ 5 ಗ್ರಾಮ ಪಂಚಾಯಿತಿಗಳಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಜಯಭೇರಿ ಬಾರಿಸಿದ್ದು, ಸುಮಾರು 85ಕ್ಕೂ ಅಧಿಕ ಮಂದಿ ಸದಸ್ಯರು ಗೆಲುವು ಸಾಧಿಸಿದ್ದಾರೆ.
ಹಾಸನದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಹಾಸನ ವಿಧಾನಸಭಾ ಕ್ಷೇತ್ರದ 5 ಗ್ರಾಮ ಪಂಚಾಯಿತಿಗಳಲ್ಲಿಯೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಜಯಭೇರಿ ಬಾರಿಸಿದ್ದು, ಸುಮಾರು 85ಕ್ಕೂ ಅಧಿಕ ಮಂದಿ ಸದಸ್ಯರು ಗೆಲುವು ಸಾಧಿಸಿದ್ದಾರೆ. 40 ವರ್ಷಗಳಿಂದ ಯಾವ ಪಕ್ಷಕ್ಕೆ ಬಹುಮತ ನೀಡದ ಜನರು ಇಂದು ಭದ್ರಕೋಟೆಯನ್ನ ಭೇದಿಸಿಕೊಂಡು ಬರುತ್ತಿದ್ದಾರೆ ಎಂದರು.
ಗ್ರಾಪಂ ಚುನಾವಣೆಯಲ್ಲಿ ಬಹುಮತಗಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಸಾಲಗಾಮೆ ಹೋಬಳಿಯ 5 ಪಂಚಾಯಿತಿಗಳಲ್ಲಿ ಅಧ್ಯಕ್ಷರ ಅವಿರೋಧ ಆಯ್ಕೆಯಾಗಿದೆ. ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅರ್ಜಿಯನ್ನೂ ಸಲ್ಲಿಸದ ಪರಿಸ್ಥಿತಿ ಬಂದಿದೆ. ನನ್ನನ್ನು ಆಕಸ್ಮಿಕ ಶಾಸಕ ಎಂದವರಿಗೆ ಕ್ಷೇತ್ರದ ಜನ ಉತ್ತರಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ದೋರಣೆ ನಡೆಯಲ್ಲ ಎಂಬುದಕ್ಕೆ ಇಂದಿನ ಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ. ಒಂದಾನೊಂದು ಕಾಲದ ಭದ್ರಕೋಟೆ ಕಳಚಿ ಬಿದ್ದಿದೆ ಎಂದು ಮಾಜಿ ಸಚಿವ ರೇವಣ್ಣ ಹೆಸರನ್ನು ಪ್ರಸ್ತಾಪಿಸದೆ ತಿರುಗೇಟು ನೀಡಿದರು.