ಹಾಸನ:ಇಲ್ಲಿನ ಶಾಲಾ ಕೊಠಡಿಯ ಬೆಂಚ್ನಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳ ಬದಲಿಗೆ ಮೂವರನ್ನು ಕೂರಿಸಿ ಪಾಠ ಮಾಡುತ್ತಿದ್ದುದು ಕಂಡುಬಂದಿದೆ.
ಹಾಸನದಲ್ಲಿ ವಿದ್ಯಾರ್ಥಿಗಳಿಗೆ ಆಸನಗಳ ಕೊರತೆ: ಸಮಸ್ಯೆ ಸರಿಪಡಿಸಿದ ಡಿಡಿಪಿಐ
ಹಾಸನದಲ್ಲಿ ಶಾಲೆ ಆರಂಭವಾದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಆಸನದ ತೊಂದರೆ ಉಂಟಾಗಿತ್ತು.
ಹಾಸನದಲ್ಲಿ ವಿದ್ಯಾರ್ಥಿಗಳಿಗೆ ಆಸನಗಳ ಕೊರತೆ
ಸರ್ಕಾರಿ ಬಾಲಕಿಯರ ವಿಭಜಿತ ಕಾಲೇಜಿನಲ್ಲಿ ಘಟನೆ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಪ್ರೌಢ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಕಾಶ್ ಭೇಟಿ ನೀಡಿ, ತಲಾ ಇಬ್ಬರು ಮಕ್ಕಳಂತೆ ಡೆಸ್ಕ್‌ನಲ್ಲಿ ಕೂರಿಸಬೇಕು ಎಂದು ನಿರ್ದೇಶನ ನೀಡಿದರು.
ಬಳಿಕ ಮಾತನಾಡಿದ ಪ್ರಕಾಶ್, ನನ್ನ ಗಮನಕ್ಕೆ ಬಂದ ತಕ್ಷಣ ಅಲ್ಲಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದೇನೆ. ಮೊದಲ ದಿನವೇ ನಿರೀಕ್ಷೆಗೂ ಮೀರಿದ ವಿದ್ಯಾರ್ಥಿಗಳು ಬಂದಿದ್ದಕ್ಕೆ ಈ ರೀತಿ ಆಗಿದೆ. ಮುಂದೆ ಇಂತಹ ಪ್ರಮಾದ ಜರುಗದಂತೆ ಎಚ್ಚರಿಕೆವಹಿಸಲು ಸೂಚನೆ ನೀಡಿದ್ದೇನೆ ಎಂದರು.