ಕರ್ನಾಟಕ

karnataka

ETV Bharat / state

ರೈತರ ಸಾಲ ಮನ್ನಾ ಮಾಡಿದ ಏಕೈಕ ರಾಜಕಾರಣಿ ಕುಮಾರಸ್ವಾಮಿ: ನಿಖಿಲ್ ಕುಮಾರಸ್ವಾಮಿ - nikhil kumaraswamy in Hasan

ಜನತಾ ದಳ ರೈತ ವಿರೋಧಿ ಪಕ್ಷವಲ್ಲ. ರೈತರಿಗೆ ನಮ್ಮ ಪಕ್ಷ ಏನೆಂಬುದು ಗೊತ್ತಿದೆ. ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಿದ ಏಕೈಕ ರಾಜಕಾರಣಿ ಅಂದರೇ ಕುಮಾರಸ್ವಾಮಿ. ಇಷ್ಟು ಸಾಕು ಕುಮಾರಸ್ವಾಮಿಯವರು ರೈತರ ಪರವಾಗಿದ್ದಾರೆ ಎಂದು ತಿಳಿಯೋದಕ್ಕೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರಿಗೆ ಪ್ರತ್ಯುತ್ತರು ನೀಡಿದರು.

nikhil kumaraswamy
ನಿಖಿಲ್ ಕುಮಾರಸ್ವಾಮಿ

By

Published : Dec 12, 2020, 3:43 AM IST

ಹಾಸನ: ಜೆಡಿಎಸ್ ಕೇವಲ ಹಾಸನ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಸಿದ್ದರಾಮಯ್ಯ ಅವರು ಮಾತನಾಡಬೇಕಾದರೆ ಯೋಚನೆ ಮಾಡಿ ಮಾತನಾಡಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಓರ್ವ ಅನುಭವಿ ರಾಜಕಾರಣಿ. ಕುಮಾರಸ್ವಾಮಿ ಬಗ್ಗೆ ಮಾತನಾಡಬೇಕಾದರೇ ಯೋಚನೆ ಮಾಡಿ ಮಾತನಾಡಬೇಕು. ಇಲ್ಲವಾದರೆ ಅವರ ಗೌರವವನ್ನು ಅವರೇ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.

ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ

ಜನತಾ ದಳ ರೈತ ವಿರೋಧಿ ಪಕ್ಷವಲ್ಲ. ರೈತರಿಗೆ ನಮ್ಮ ಪಕ್ಷ ಏನೆಂಬುದು ಗೊತ್ತಿದೆ. ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಿದ ಏಕೈಕ ರಾಜಕಾರಣಿ ಅಂದರೇ ಕುಮಾರಸ್ವಾಮಿ. ಇಷ್ಟು ಸಾಕು ಕುಮಾರಸ್ವಾಮಿಯವರು ರೈತರ ಪರವಾಗಿದ್ದಾರೆ ಎಂದು ತಿಳಿಯೋದಕ್ಕೆ ಎಂದು ಸಿದ್ದರಾಮಯ್ಯನವರಿಗೆ ಪ್ರತ್ಯುತ್ತರು ನೀಡಿದರು.

ಚಿಟ್​ ಫಂಡ್​ ಹಗರಣದ ತನಿಖೆಯಲ್ಲಿ ಹಸ್ತಕ್ಷೇಪ ಆರೋಪ: ಸಿಬಿಐ ನಿರ್ದೇಶಕರಿಗೆ ಸುವೇಂದು ಪ್ರಶ್ನೆ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯುವ ಜನತೆ ಹೆಚ್ಚಾಗಿ ಸ್ಪರ್ಧಿಸುತ್ತಿದ್ದು, ಮುಂದಿನ ದಿನದಲ್ಲಿ ಗ್ರಾಮೀಣಾ ಭಾಗ ಅಭಿವೃದ್ಧಿ ಹೊಂದಲಿದೆ. ಅಭಿವೃದ್ಧಿಯ ವಿಚಾರದಲ್ಲಿ ಹಿರಿಯರು ಕೂತು ಯುವಕರಿಗೆ ಮಾರ್ಗದರ್ಶನ ನೀಡಬೇಕಾಗಿದೆ. ಅದೇ ರೀತಿ ನಾನು ಈಗಾಗಲೇ ರಾಮನಗದಲ್ಲಿ ಹಲವು ಸಭೆಗಳನ್ನ ಮಾಡಿ ಕೆಲವು ಸಲಹೆ ನೀಡಿದ್ದೇನೆ ಎಂದರು.

ABOUT THE AUTHOR

...view details