ಹಾಸನ :ಕಳೆದ ವರ್ಷ ಸುರಿದ ಮಳೆಯಿಂದ ನಗರದಲ್ಲಿ ಸಾಕಷ್ಟು ಅನಾಹುತಗಳಾಗಿದ್ದವು. ಅದಕ್ಕಾಗಿ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಇವತ್ತು ಶಾಸಕ ಪ್ರೀತಂ ಜೆ ಗೌಡ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆ ಅನಾಹುತ ಆಗುವ ಮೊದಲೇ ಎಚ್ಚೆತ್ತುಕೊಳ್ಬೇಕು ಅಂತಾರೆ ಶಾಸಕ ಪ್ರೀತಂಗೌಡ..
ಎತ್ತರ ಪ್ರದೇಶದಿಂದ ತಗ್ಗು ಪ್ರದೇಶಗಳಿಗೆ ನೀರು ಹರಿಯುವುದರಿಂದ ರಸ್ತೆ ಇಕ್ಕೆಲಗಳಲ್ಲಿ ಮತ್ತು ಚರಂಡಿಗಳಲ್ಲಿ ರಭಸವಾಗಿ ಹರಿಯುವ ನೀರು ಏಕಾಏಕಿ ಮನೆಗೆ ಹೋಗುತ್ತಿದೆ. ಇದರಿಂದ ನಗರದ ರಾಜಕುಮಾರ್ ಬಡಾವಣೆ, ರಂಗೋಲಿ ಹಳ್ಳ, ಪೆನ್ಷನ್ ಮೊಹಲ್ಲಾ, ಅಂಬೇಡ್ಕರ್ ನಗರ, ಹೊಯ್ಸಳನಗರ ಹಾಗೂ ರಾಘವೇಂದ್ರ ಬಡಾವಣೆಗಳಲ್ಲಿನ ಜನರ ಪರಿಸ್ಥಿತಿ ನಿಜಕ್ಕೂ ಹೇಳತೀರದಾಗಿತ್ತು.

ಈ ಎಲ್ಲ ಬಡಾವಣೆಗಳಿಗೆ ಭೇಟಿ ನೀಡಿದಾಗ ಶಾಸಕರಿಗೆ ಅಲ್ಲಿನ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಇದನ್ನೆಲ್ಲವನ್ನೂ ಆಲಿಸಿದ ಪ್ರೀತಂ ಜೆ ಗೌಡರು,ನೀರು ಹರಿಯುವಂತಹ ವ್ಯವಸ್ಥೆ ಹಾಗೂ ಚರಂಡಿಗಳ ಸ್ವಚ್ಛತೆ ಕುರಿತ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಕಳೆದ ಸಾರಿ ಮಳೆ ಅವಾಂತರದಿಂದ 40ಕ್ಕೂ ಅಧಿಕ ಮನೆ ಹಾನಿಯಾಗಿ ಜೊತೆಗೆ 20ಕ್ಕೂ ಹೆಚ್ಚು ಮನೆಯೊಳಗೇ ನೀರು ನುಗ್ಗಿತ್ತು. ವಾರಗಟ್ಟಲೆ ಮನೆಯಲ್ಲಿ ವಾಸ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ಸಾರಿ ಆ ಸ್ಥಿತಿ ನಿರ್ಮಾಣವಾಗಬಾರದು ಅಂತಾ ಶಾಸಕರು ನಗರ ಪ್ರದಕ್ಷಿಣೆ ನಡೆಸಿ ಮುಂಜಾಗರೂಕತಾ ಕ್ರಮಕೈಗೊಳ್ಳಲು ಅಧಿಕಾರಿಗಳಿಗೂ ಸೂಚಿಸಿದ್ದಾರೆ.