ಹಾಸನ: ಕಳೆದ ವಾರದಿಂದ ಕರ್ನಾಟಕ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದ್ದು, ಇಂದು ಬಜೆಟ್ ಮಂಡನೆಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 8ನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್ನಲ್ಲಿ ಹಾಸನ ಜಿಲ್ಲೆಗೆ ಸಿಕ್ಕಿರುವ ಅನುದಾನ ಮತ್ತು ಯೋಜನೆಗಳ ಮಾಹಿತಿ ಇಲ್ಲಿದೆ.
ಬಿಎಸ್ವೈ ಬಜೆಟ್ನಲ್ಲಿ ಹಾಸನ ಜಿಲ್ಲೆಗೆ ಸಿಕ್ಕಿದ್ದೇನು?
ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2021-2022ನೇ ಸಾಲಿನ ರಾಜ್ಯ ಬಜೆಟ್ 2021 ಮಂಡನೆ ಮಾಡಿದ್ದು, ಹಾಸನ ವಿಮಾನ ನಿಲ್ದಾಣಕ್ಕೆ 175 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ.
ಬಜೆಟ್
ಬಿ ಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ನಲ್ಲಿ ಹಾಸನಕ್ಕೆ ಸಿಕ್ಕಿದ್ದಿಷ್ಟು:
- ಹಾಸನ ವಿಮಾನ ನಿಲ್ದಾಣಕ್ಕೆ 175 ಕೋಟಿ
- ಹಾಸನದಲ್ಲಿ ಸ್ವಯಂ ಚಾಲಿತ ಚಾಲನೆ ಪರೀಕ್ಷಾ ಪಥ ಸ್ಥಾಪನೆ.
- ವಿವಿಧ ಜನಾಂಗಗಳ ಹಾಸ್ಟೆಲ್ ನಿರ್ಮಾಣಕ್ಕೆ ಒತ್ತು
- ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ಕ್ರಮ.
- ಹಿಂದುಳಿದ ತಾಲೂಕು ಎಂದು ಕರೆಯಲಾಗಿರುವ ಆಲೂರು ಕ್ಷೇತ್ರಕ್ಕೆ ಅನುದಾನ
- ಸಾರಿಗೆ ಇಲಾಖೆಯ ಮಾಲೀಕತ್ವ ವರ್ಗಾವಣೆ ಸರಕು ಸಾಗಣೆ ಮುಂತಾದವುಗಳಿಗೆ ಕಾಂಟ್ಯಾಕ್ಟ್ ಲೆಸ್ ಮತ್ತು ಫೇಸ್ ಲೆಸ್ ಹಾಗೂ ಕ್ಯಾಸ್ಲೆಸ್ ಯೋಜನೆ ಜಾರಿ ಹಾಸನಕ್ಕೆ ಅನ್ವಯ.
- ಕಟ್ಟಡ ಕಾರ್ಮಿಕರ ಮಕ್ಕಳ ಸಂರಕ್ಷಣೆಗೆ ಹಾಸನದಲ್ಲಿ ಕೇಂದ್ರ ಸ್ಥಾಪನೆ.
- ಆಸ್ಪತ್ರೆಗಳ ಆಧುನೀಕರಣಕ್ಕೆ ಮತ್ತು ಮೇಲ್ದರ್ಜೆಗೆ ಒತ್ತು.
- ಹಾಸನದಲ್ಲಿ ಬಿ ಆರ್ ಅಂಬೇಡ್ಕರ್ ಸ್ಮಾರಕ ಭವನ ನಿರ್ಮಾಣ.
- ಎತ್ತಿನಹೊಳೆ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಹೆಚ್ಚಿನ ಒತ್ತು ನೀಡಿ ಸರ್ಕಾರದಿಂದ ನೆರವಿನ ಘೋಷಣೆ.
Last Updated : Mar 8, 2021, 6:34 PM IST