ಕರ್ನಾಟಕ

karnataka

ETV Bharat / state

ಅಕ್ರಮ ವಿದ್ಯುತ್ ತಂತಿ ಸಂಪರ್ಕ: ವ್ಯಕ್ತಿ ಸಾವು - ಓರ್ವ ವ್ಯಕ್ತಿ ಸಾವು

ಹಾಸನ ಜಿಲ್ಲೆಯ ನಾಗೇನಹಳ್ಳಿಯಲ್ಲಿ ಹಣದ ಆಸೆಗೆ ಬಿದ್ದು ಅಕ್ರಮವಾಗಿ ವಿದ್ಯುತ್ ತಂತಿ ಸಂಪರ್ಕಿಸಲು ಹೋಗಿ ವಿದ್ಯುತ್​ ತಗುಲಿ ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.

man died by current shock, ಓರ್ವ ವ್ಯಕ್ತಿ ಸಾವು

By

Published : Nov 13, 2019, 8:48 PM IST

ಹಾಸನ:ಅಕ್ರಮವಾಗಿ ವಿದ್ಯುತ್ ತಂತಿ ಸಂಪರ್ಕಿಸಲು ಹೋಗಿ ವ್ಯಕ್ತಿಯೊಬ್ಬ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ನಾಗೇನಹಳ್ಳಿಯಲ್ಲಿ ನಡೆದಿದೆ.

ಅಕ್ರಮ ವಿದ್ಯುತ್ ತಂತಿ ಸಂಪರ್ಕ ಕಲ್ಪಿಸಲು ಹೋಗಿ ವ್ಯಕ್ತಿ ಸಾವು

ದಿನೇಶ್ (34) ಮೃತ ದುರ್ದೈವಿ. ಈತ ವ್ಯಕ್ತಿಯೊಬ್ಬರಿಂದ ಹಣ ಪಡೆದು ಅಕ್ರಮವಾಗಿ ಬೇರೊಬ್ಬರಿಗೆ ವಿದ್ಯುತ್ ತಂತಿಯ ಸಂಪರ್ಕ ಕೊಡುವ ವೇಳೆ ಈ ಅವಘಡ ಸಂಭವಿಸಿದೆ.

ವಿದ್ಯುತ್ ಸಂಪರ್ಕ ಪಡೆಯುವ ಮುನ್ನ ಚೆಸ್ಕಾಂ ಇಲಾಖೆಯಿಂದ ಅನುಮತಿ ಪಡೆದು ನಂತರ ಸಂಪರ್ಕ ಕೊಡಬೇಕು. ಆದರೆ, ಗುತ್ತಿಗೆದಾರರು ಗಮನಕ್ಕೂ ತರದೆ, ಇಲಾಖೆಯ ಗಮನಕ್ಕೂ ತರದೇ ಹಣದ ಆಸೆಗೆ ಬಿದ್ದು ವಿದ್ಯುತ್ ಸಂಪರ್ಕ ನೀಡಲು ಮುಂದಾದಾಗ ವಿದ್ಯುತ್ ಸ್ಪರ್ಶಸಿ ತನ್ನ ಪ್ರಾಣಕ್ಕೆ ಕುತ್ತು ತಂದ ಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ABOUT THE AUTHOR

...view details