ಕರ್ನಾಟಕ

karnataka

ETV Bharat / state

ತಹಶೀಲ್ದಾರ್ ಮಂಜುನಾಥ್​​ರನ್ನು ವರ್ಗ ಮಾಡಿದ್ರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ..

ಮಹಾಮಾರಿಯಿಂದ ನಿಯಂತ್ರಣದಲ್ಲಿಡಲು ಎಲ್ಲಾ ವ್ಯವಸ್ಥೆಯನ್ನು ಸಹ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದು ಆದರೂ ಸಹ ಕೆಲವರು ರಾಜಕೀಯದ ದುರುದ್ದೇಶದಿಂದ ತಹಶೀಲ್ದಾರ್‌ರನ್ನು ವರ್ಗಾವಣೆ ಮಾಡುವಂತೆ ಒತ್ತಡ ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ..

Sakaleshpur
ಸಕಲೇಶಪುರ

By

Published : Jun 29, 2020, 8:32 PM IST

ಸಕಲೇಶಪುರ :ತಾಲೂಕಿನಲ್ಲಿ ಯಾವುದೇ ರೀತಿಯ ಕೊರೊನಾ ಪ್ರಕರಣ ಕಂಡು ಬರದಂತೆ ಎಚ್ಚರಿಕೆ ವಹಿಸಿರುವ ತಹಶೀಲ್ದಾರ್ ಮಂಜುನಾಥ್​​ರನ್ನು ವಿನಾಕಾರಣ ವರ್ಗಾವಣೆ ಮಾಡಿದರೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಮೂಲಭೂತ ಹಕ್ಕುಗಳ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಹೆನ್ರಿ ಕಾಕನಮನೆ ಹೇಳಿದರು.

ಮೂಲಭೂತ ಹಕ್ಕುಗಳ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಹೆನ್ರಿ ಕಾಕನಮನೆ

ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ತಹಶೀಲ್ದಾರ್ ಮಂಜುನಾಥ್, ಈವರೆಗೂ ಯಾವುದೇ ಒಂದು ಕೋವಿಡ್-19 ಪ್ರಕರಣ ತಾಲೂಕಿನಲ್ಲಿ ವರದಿ ಆಗದಂತೆ, ಕಟ್ಟುನಿಟ್ಟಿನ ಕ್ರಮಕೈಗೊಂಡಿರುತ್ತಾರೆ. ಕಡ್ಡಾಯ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಜನಜಾಗೃತಿ ಅರಿವನ್ನು ಮೂಡಿಸಲು ತಹಶೀಲ್ದಾರ್ ಕಳೆದ ಮೂರು ತಿಂಗಳಿನಿಂದ ಸತತ ಶ್ರಮ ಹಾಕಿದ್ದಾರೆ ಎಂದರು.

ಲಾಕ್​​ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಆಯಾ ರಾಜ್ಯಗಳಿಗೆ ತಲುಪಿಸುವಂತಹ ವ್ಯವಸ್ಥೆಯನ್ನು ತಹಶೀಲ್ದಾರ್ ಮಂಜುನಾಥ್ ಮಾಡಿದ್ದರು. ಸಕಲೇಶಪುರ ತಾಲೂಕನ್ನು ಕೊರೊನಾ ಮಹಾಮಾರಿಯಿಂದ ನಿಯಂತ್ರಣದಲ್ಲಿಡಲು ಎಲ್ಲಾ ವ್ಯವಸ್ಥೆಯನ್ನು ಸಹ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದು ಆದರೂ ಸಹ ಕೆಲವರು ರಾಜಕೀಯದ ದುರುದ್ದೇಶದಿಂದ ತಹಶೀಲ್ದಾರ್‌ರನ್ನು ವರ್ಗಾವಣೆ ಮಾಡುವಂತೆ ಒತ್ತಡ ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಯಾವುದೇ ಕಾರಣಕ್ಕೂ ಕೋವಿಡ್-19 ಸಮಸ್ಯೆ ಮುಗಿಯುವವರೆಗೂ ವರ್ಗಾವಣೆ ಮಾಡಬಾರದೆಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ನವೀನ್ ಸದಾ, ಬೆಳಗೋಡು ಬಸವರಾಜು, ಬೈರಪ್ಪ, ಸುರೇಂದ್ರ , ಜುಬೇರ್ ಮುಂತಾದವರು ಹಾಜರಿದ್ದರು.

ABOUT THE AUTHOR

...view details