ಅರಸೀಕೆರೆ(ಹಾಸನ): ಸಿದ್ದರಾಮಯ್ಯ ಅವರ್ಗೂ ನನಗೂ ಅಪಾರವಾದ ಪ್ರೀತಿ ವಿಶ್ವಾಸ ಇದೆ. ನಾನು ಮತ್ತು ಅವರು ಮಾನಸ ಸ್ನೇಹಿತರು. ನಾನು ಯಾವುದೇ ಫೈಲ್ ಹಿಡ್ಕೊಂಡು ಹೋದರು ನನ್ನನ್ನ ಬರಿಗೈನಲ್ಲಿ ಕಳುಹಿಸುತ್ತಿರಲಿಲ್ಲ ಎಂದು ಶಾಸಕ ಕೆ ಎಂ ಶಿವಲಿಂಗೇಗೌಡ ಅವರು ಸಿದ್ದರಾಮಯ್ಯನವರನ್ನು ಕೊಂಡಾಡಿದ್ದಾರೆ.
ಅರಸೀಕೆರೆಯ ಗುತ್ತಿನಗೆರೆ ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಸಿಕೆರೆ ತಾಲೂಕಿನ ಇತಿಹಾಸಕ್ಕೆ ಸಿದ್ದರಾಮಯ್ಯ ಭದ್ರ ಬುನಾದಿ ಹಾಕಿದ್ದಾರೆ. ಎಚ್ ಕೆ ಪಾಟೀಲ್ ಯೋಜನೆಯನ್ನು ಶತಾಯುಗತಾಯ ಆಗೋದಿಲ್ಲ ಅಂತ ಹೇಳಿದ್ರು. ಸಿದ್ದರಾಮಯ್ಯ ಅವತ್ತು ನೀರಾವರಿ ಯೋಜನೆಯನ್ನು ನಮ್ಮ ತಾಲೂಕಿಗೆ ಕೊಟ್ರು. ತಾಲೂಕಿಗೆ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಅಅರಸೀಕೆರೆ ಎಂದರೆ ಬರದ ನಾಡು ಫ್ಲೋರೈಡ್ ಯುಕ್ತ ನೀರನ್ನ ಕುಡಿದು, ನಾವು ಕಾಯಿಲೆಗಳಿಗೆ ತುತ್ತಾಗುತ್ತಿದ್ದೆವು.ಇದನ್ನು ನಾನು ವಿಧಾನಸಭೆಯಲ್ಲಿ ಚರ್ಚೆ ಮಾಡಿದೆ. ಅದಕ್ಕೆ ಆಗ ನೀರಾವರಿ ಸಚಿವರಾಗಿದ್ದ ಎಚ್ ಕೆ ಪಾಟೀಲ ಅವರು, ಈ ಯೋಜನೆ ಮಾಡಲು ಸಾಧ್ಯವೇ ಇಲ್ಲ ಅಂತ ಹೇಳಿದ್ರು. ಆದರೆ ಸಿದ್ದರಾಮಯ್ಯ ಆಡಳಿತದಲ್ಲಿ ಅರಸೀಕೆರೆಗೆ ನೀರಾವರಿ ಯೋಜನೆಯಾಗಿದೆ. ನೂರಾರು ಕೋಟಿ ಹಣವನ್ನು ಬಿಡುಗಡೆ ಮಾಡುವ ಮೂಲಕ ಇವತ್ತು ಅರಸೀಕೆರೆಯಲ್ಲಿ ಫ್ಲೋರೈಡ್ ಮುಕ್ತ ಕುಡಿಯುವ ನೀರು ಬರಲು ಸಾಧ್ಯವಾಗಿದೆ.ಇವತ್ತು ಅರಸೀಕೆರೆಗೆ 530 ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆ ಆಗಿದೆ. ಅಂದ್ರೆ ಅದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಅಭಿಪ್ರಾಯ ತಿಳಿಸಿದರು.
ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಿದೆ ಎಂದರೆ ಅದಕ್ಕೆ ಸಿದ್ದರಾಮಯ್ಯ ಅವರು ಕಾರಣ. ನಾವೆಲ್ಲ ಒಂದೇ ಪಕ್ಷದಲ್ಲಿ ಇದ್ದೆವು ವಿವಿಧ ಕಾರಣಗಳಿಂದ ಹೊರಗೆ ಬಂದು, ತಾಲೂಕು ಅಭಿವೃದ್ಧಿ ವಿಚಾರದಲ್ಲಿ ನಾನು ಯಾವುದೇ ದ್ರೋಹ ಬಗೆದಿಲ್ಲ. 2004ರಲ್ಲಿ ನಾನು 14 ಮತಗಳಿಂದ ಸೋತಾಗ ನಾನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ಬೇಕು ಅಂತ ಹೇಳಿದ್ದೆ. ಅದಕ್ಕವರು ನಾನು ಒಂದೇ ಒಂದು ದಿನ ಕ್ಯಾನ್ವಾಸ್ಗೆ ಬರಲಿಲ್ಲ. ಹಾಗಾಗಿ ನೀನು ಸೋತೆ ಕಣಪ್ಪ ಅಂತ ನೊಂದುಕೊಂಡು ಹೇಳಿದರು ಅಂತ ಸಿದ್ದರಾಮಯ್ಯನವರನ್ನ ಹಾಡಿ ಹೊಗಳಿದರು.