ಕರ್ನಾಟಕ

karnataka

ETV Bharat / state

ಹಾಸನ : ತನ್ನ ಪತ್ನಿಗೆ ಕರೆ ಮಾಡಿದಕ್ಕೆ ವ್ಯಕ್ತಿಯನ್ನ ಕೊಲೆ ಮಾಡಿದ ಪತಿ!

ಮನೆಯೊಳಗೆ ಕೂಡಿ ಹಾಕಿ ನೇಣು ಬಿಗಿದಿದ್ದು, ನಂತರ ಬಲವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಹಳ್ಳಿ ಮೈಸೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ..

ತನ್ನ ಪತ್ನಿಗೆ ಕರೆ ಮಾಡಿದಕ್ಕೆ ವ್ಯಕ್ತಿಯನ್ನ ಕೊಲೆ ಮಾಡಿದ ಪತಿ
ತನ್ನ ಪತ್ನಿಗೆ ಕರೆ ಮಾಡಿದಕ್ಕೆ ವ್ಯಕ್ತಿಯನ್ನ ಕೊಲೆ ಮಾಡಿದ ಪತಿ

By

Published : Dec 27, 2021, 7:23 PM IST

ಹಾಸನ :ತನ್ನ ಹೆಂಡತಿಗೆ ಫೋನ್ ಕರೆ ಮಾಡಿದ ಎಂಬ ಒಂದೇ ಕಾರಣಕ್ಕೆ ಪತಿಯೊಬ್ಬ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಕೆಆರ್‌ನಗರ ತಾಲೂಕಿನ ಕುಪ್ಪೆಮುದ್ದನಹಳ್ಳಿ ಗ್ರಾಮದ ರವಿ (46) ಕೊಲೆಯಾದವ. ಈತನ ಕೊಲೆ ಮಾಡಿರುವ ಆರೋಪವನ್ನು ಮಹಿಳೆಯ ಪತಿ ಹೊಯ್ಸಳ ಹಾಗೂ ಆತನ ಸ್ನೇಹಿತರಾದ ಬಳೆ ಮಂಜ, ಶ್ರೀಜಿತ್, ಸಾಗರ್ ಎದುರಿಸುತ್ತಿದ್ದಾರೆ.

ರವಿ ಪತ್ನಿಯಿಂದ ದೂರವಾಗಿದ್ದ. ಅವರು ಯಾರಿಗೋ ಕರೆ ಮಾಡುವಾಗ ಅದು ಆಕಸ್ಮಿಕವಾಗಿ ಮಹಿಳೆಗೆ ಹೋಗಿದೆ ಎನ್ನಲಾಗಿದೆ. ನಂತರ ತನ್ನನ್ನು ಮದುವೆಯಾಗುವಂತೆ ರವಿ ಅವರಿಗೆ ಕೇಳುತ್ತಿದ್ದನಂತೆ.

ಪದೇಪದೆ ತನ್ನ ಪತ್ನಿಗೆ ಕರೆ ಮಾಡಿ ಹಿಂಸೆ ಕೊಡುತ್ತಿದ್ದಾನೆ ಎನ್ನುವ ಕಾರಣಕ್ಕೆ ಹೊಯ್ಸಳ ತನ್ನ ಸ್ನೇಹಿತರ ಜತೆಗೂಡಿ ರವಿಯ ಹತ್ಯೆ ಮಾಡಿರುವ ಆರೋಪವಿದೆ.

ಮನೆಯೊಳಗೆ ಕೂಡಿ ಹಾಕಿ ನೇಣು ಬಿಗಿದಿದ್ದು, ನಂತರ ಬಲವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಹಳ್ಳಿ ಮೈಸೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

For All Latest Updates

TAGGED:

ABOUT THE AUTHOR

...view details