ಕರ್ನಾಟಕ

karnataka

ETV Bharat / state

ಗಾರ್ಮೆಂಟ್ಸ್​ ನೌಕರರ ಪ್ರತಿಭಟನೆ; ಲಾಠಿ ಚಾರ್ಜ್​, ಹಲವರಿಗೆ ಗಾಯ

ವಿನಾಕಾರಣ ಕಾರ್ಮಿಕರ ಮೇಲೆ ಹಲ್ಲೆ ಮತ್ತು ದೌರ್ಜನ್ಯ ವಿರೋಧಿಸಿ ಆಡಳಿತ ಮಂಡಳಿ ವಿರುದ್ಧ  ನೌಕರರು ಆಕ್ರೋಶ ವ್ಯಕ್ತ ಪಡಿಸಿ, ಪ್ರತಿಭಟನೆ ನಡೆಸಿದ ಘಟನೆ ಹಾಸನದಲ್ಲಿ ನಡೆದಿದೆ.

ಕಾರ್ಮಿಕರಿಂದ ಪ್ರತಿಭಟನೆ

By

Published : Jul 24, 2019, 2:23 PM IST

ಹಾಸನ: ಇಲ್ಲಿನ ಕೈಗಾರಿಕಾ ವಲಯದಲ್ಲಿರುವ ಹಿಮ್ಮತ್ ಸಿಂಕಾ ಗಾರ್ಮೆಂಟ್ಸ್​ ಬಳಿ ನೌಕರರು ಪ್ರತಿಭಟನೆ ನಡೆಸಿದರು.

ವಿನಾಕಾರಣ ಕಾರ್ಮಿಕರ ಮೇಲೆ ಹಲ್ಲೆ ಮತ್ತು ದೌರ್ಜನ್ಯ ವಿರೋಧಿಸಿ ಆಡಳಿತ ಮಂಡಳಿ ವಿರುದ್ಧ ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಇಂದು ಕೆಲಸಕ್ಕೆ ಹಾಜರಾಗದೇ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಕಾರ್ಮಿಕರಿಂದ ಪ್ರತಿಭಟನೆ

ನಾಲ್ಕು ಸಾವಿರಕ್ಕಿಂತ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡುವ ಬೃಹತ್ ಕಾರ್ಖಾನೆ ಇದಾಗಿದ್ದು, ಕಾರ್ಮಿಕ ಕಾಯ್ದೆ ಉಲ್ಲಂಘಿಸಿ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಕೆಲಸಕ್ಕೆ ಬಂದಿರುವ‌ ಕಾರ್ಮಿಕರ ಮೇಲೆ ಇತ್ತೀಚೆಗೆ ಹಲ್ಲೆ ಮಾಡಲಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಪ್ರತಿಭಟನಾ ನಿರತ ಕಾರ್ಮಿಕರು ಪೊಲೀಸ್​ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಟಿ ಪ್ರಹಾರ ಮಾಡಿದರು. ಈ ಸಂದರ್ಭದಲ್ಲಿ ಕೆಲವು ಕಾರ್ಮಿಕರಿಗೆ ಗಾಯಗಳಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ.

For All Latest Updates

TAGGED:

ABOUT THE AUTHOR

...view details