ಹಾಸನ: ಇತ್ತೀಚಿನ ದಿನಗಳಲ್ಲಿ ಕೋವಿಡ್ ಭೀತಿಗೊಳಗಾದವರಿಗೆ ವೈದ್ಯರು, ಸಿಬ್ಬಂದಿ ಡ್ಯಾನ್ಸ್ ಮಾಡಿ ರಂಜಿಸೋದು ನಿಮಗೆಲ್ಲ ಗೊತ್ತು. ಅದೇ ರೀತಿ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲೂ ರೋಗಿಗಳಿಗೆ ಬೇಸರವಾಗದಂತೆ ಸ್ಪೀಕರ್ಗಳನ್ನು ಅಳವಡಿಸಿ ಹಾಡುಗಳನ್ನು ಪ್ಲೇ ಮಾಡಿ ರಂಜಿಸುತ್ತಾರೆ ಇಲ್ಲಿನ ಸಿಬ್ಬಂದಿ. ಈ ಸ್ಪೀಕರ್ ಅಳವಡಿಕೆಗೆ ಅಂದಾಜು 50 ಸಾವಿರ ರೂಪಾಯಿ ಖರ್ಚಾಗಿದೆ.
ಸಾಮಾನ್ಯವಾಗಿ ಯಾವುದೇ ಗವರ್ನಮೆಂಟ್ ಆಸ್ಪತ್ರೆಗೆ ಹೋದ್ರೆ, ಸರಿಯಾದ ಸೌಕರ್ಯಗಳಿರಲ್ಲ ಅಂತಾ ರೋಗಿಗಳು ಮತ್ತು ಅವರ ಸಂಬಂಧಿಕರು ಆರೋಪಿಸ್ತಾರೆ. ಆದ್ರೆ, ಈ ಆಸ್ಪತ್ರೆ ಉತ್ತಮ ಸೌಲಭ್ಯಗಳನ್ನು ಹೊಂದಿದೆ. ಇಲ್ಲಿಗೆ ಬರುವ ರೋಗಿಗಳಿಗೆ, ಕೆಲಸ ಮಾಡುವ ಸಿಬ್ಬಂದಿಗೆ ಈ ಆಸ್ಪತ್ರೆ ಮನೆಯಂತೆ ಭಾಸವಾಗುತ್ತದೆಯಂತೆ.