ಹಾಸನ: ಕೂಲಿ ಕೆಲಸಕ್ಕೆಂದು ಉತ್ತರ ಪ್ರದೇಶದಿಂದ ಹಾಸನಕ್ಕೆ ಬಂದಿದ್ದ ನಾಲ್ವರು ಯುವಕರು ಲಾಕ್ಡೌನ್ ಇರುವ ಕಾರಣ ಮರಳಿ ತಮ್ಮ ಊರಿಗೆ ಹೋಗಲು ಪರದಾಡುತ್ತಿದ್ದರು. ಇದೀಗ ಲಾಕ್ಡೌನ್ ಸಡಿಲಿಕೆ ಮಾಡಿದ್ದರಿಂದ ಸೈಕಲ್ ಏರಿ ತಮ್ಮ ಊರುಗಳತ್ತ ಹೊರಟಿದ್ದಾರೆ.
ಹಾಸನ: ಹೊಸ ಸೈಕಲ್ ಖರೀದಿಸಿ ಯುಪಿಗೆ ಪ್ರಯಾಣ ಬೆಳೆಸಿದ ಕೂಲಿ ಕಾರ್ಮಿಕರು! - ಉತ್ತರಪ್ರದೇಶ
ಹಾಸನ ಹೊರವಲಯದ ಕೆಐಎಡಿಬಿ ಬಳಿ ಗ್ರಾನೈಟ್ ಮತ್ತು ಇನ್ನಿತರ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಉತ್ತರ ಪ್ರದೇಶ ಮೂಲದ ನಾಲ್ವರು ಯುವಕರು ಸೈಕಲ್ ಏರಿ ತಮ್ಮ ಊರಿನತ್ತ ಹೊರಟಿದ್ದಾರೆ.
ಹಾಸನ ಹೊರವಲಯದ ಕೆಐಎಡಿಬಿ ಬಳಿ ಗ್ರಾನೈಟ್ ಮತ್ತು ಇನ್ನಿತರ ಸಣ್ಣಪುಟ್ಟ ಕೆಲಸ ಮಾಡಿಕೊಂಡು ನಾಲ್ವರು ಜೀವನ ನಡೆಸುತ್ತಿದ್ದರು. ಆದರೆ ಲಾಕ್ಡೌನ್ನಿಂದ ಇಲ್ಲಿರಲು ಸಾಧ್ಯವಾಗದೆ ತಮ್ಮ ಊರಿಗೂ ಹೋಗಲೂ ಆಗದೆ ಕಳೆದ ಒಂದೂವರೆ ತಿಂಗಳಿಂದನಿಂದ ಪರದಾಡುತ್ತಿದ್ದರು.
ಇದೀಗ ಲಾಕ್ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆ ಜಿಲ್ಲಾ ವ್ಯಾಪ್ತಿಯಲ್ಲಿ ಮಾತ್ರ ಜಿಲ್ಲಾಡಳಿತ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಉತ್ತರ ಪ್ರದೇಶಕ್ಕೆ ಹೋಗಲು ಅವರ ಬಳಿ ಸಾಕಷ್ಟು ಹಣವಿಲ್ಲದೆ ಇರುವುದರಿಂದ ಮತ್ತು ರೈಲು ಸಂಚಾರ ಇಲ್ಲದ ಕಾರಣ ಕೊನೆಗೆ ಯೋಚಿಸಿ ಈ ನಾಲ್ವರು ಯುವಕರು ತಾವು ಕೂಡಿಟ್ಟ ಹಣದಲ್ಲಿ ನಗರದ ಸೈಕಲ್ ಶಾಪ್ನಲ್ಲಿ ಸೈಕಲ್ಗಳನ್ನು ಖರೀದಿಸಿ ತಮ್ಮ ಊರುಗಳತ್ತ ಹೊರಟಿದ್ದಾರೆ.