ಕರ್ನಾಟಕ

karnataka

ETV Bharat / state

ಹಾಸನ: ಕೃಷ್ಣೇಗೌಡ ಕೊಲೆ ಪ್ರಕರಣ ಸಿಐಡಿ ತನಿಖೆಗೆ ವರ್ಗಾಯಿಸಿ ಎಡಿಜಿಪಿ ಆದೇಶ - ನ್ಯಾಯಾಂಗ ಬಂಧನ

ಹಾಸನದ ಉದ್ಯಮಿ ಕೃಷ್ಣೇಗೌಡ ಕೊಲೆ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.

CID investigation
ಸಿಐಡಿ ತನಿಖೆ

By ETV Bharat Karnataka Team

Published : Nov 25, 2023, 5:30 PM IST

Updated : Nov 25, 2023, 6:16 PM IST

ಹಾಸನ:ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಪ್ತರಾಗಿದ್ದ ಉದ್ಯಮಿ ಕೃಷ್ಣೇಗೌಡನ ಅವರ ಕೊಲೆಯಾಗಿ ಮೂರು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಫಲಗೊಂಡಿರುವ ಹಿನ್ನೆಲೆ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ. ನಗರದ ಹೊರ ವಲಯ ಕೆಐಎಡಿಬಿ ಬಳಿ ಆಗಸ್ಟ್ 9 ರಂದು ಗ್ರಾನೈಟ್ ಉದ್ಯಮಿ, ಜೆಡಿಎಸ್ ಮುಖಂಡನನ್ನು ಇನ್ನೋವಾ ಕಾರಿನಲ್ಲಿ ಬಂದ ನಾಲೈದು ಮಂದಿ ದುಷ್ಕರ್ಮಿಗಳು ಕೃಷ್ಣಗೌಡರ ಕಾರನ್ನು ಅಡ್ಡಗಟ್ಟಿ ಮಾರಾಕಾಸ್ತ್ರಗಳಿಂದ ಕೊಲೆ ಮಾಡಿದ್ದರು.

ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಪ್ರಮುಖ ಆರೋಪಿ ಯೋಗಾನಂದ ಮತ್ತು ಅನಿಲ್ ಎಂಬುವರು ತಲೆಮರೆಸಿಕೊಂಡಿದ್ದರು. 3 ತಿಂಗಳಾದರೂ ಆರೋಪಿಗಳನ್ನು ಹಿಡಿಯುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಫಲವಾಯಿತು. ಹೀಗಾಗಿ ಪೋಷಕರು ಸಿಐಡಿಗೆ ಪ್ರಕರಣ ವರ್ಗಾಹಿಸಬೇಕೆಂದು ಹೆಚ್.ಡಿ. ರೇವಣ್ಣನ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.

ಪೋಷಕರ ಮನವಿ ಮೇರೆಗೆ ಕೊಲೆ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಅವರು ಈ ಪ್ರಕರಣವನ್ನು ಈಗ ಸಿಐಡಿ ತನಿಖೆಗೆ ವಹಿಸಿದ್ದಾರೆ. ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಅವರು ಪ್ರಕರಣವನ್ನು ಸಿಐಡಿಗೆ ವಹಿಸಲು ಆದೇಶ ಮಾಡುವ ಮೂಲಕ ಪ್ರಕರಣಕ್ಕೆ ಮತ್ತೆ ಮರುಜೀವ ಬಂದಂತಾಗಿದೆ. ಹೀಗಾಗಿ ಪರೋಕ್ಷವಾಗಿ ಹಾಸನ ಪೊಲೀಸ್​ಗೆ ಚಾಟಿ ಬೀಸಿದೆ.

ಪ್ರಕರಣದ ಹಿನ್ನೆಲೆ: ಕೃಷ್ಣೇಗೌಡರನ್ನು ಆರೋಪಿ ಸುರೇಶ್ ಎಂಬಾತ ಯೋಗಾನಂದ ಹೊನ್ನೇನಹಳ್ಳಿಗೆ ಪರಿಚಯ ಮಾಡಿಕೊಟ್ಟಿದ್ದ, ಪರಿಚಯ ಸ್ನೇಹವಾಗಿ ತಿರುಗಿತು. ನಂತರ ಕೃಷ್ಣೇಗೌಡರ ಯಾವುದೋ ಒಂದು ಪ್ರಕರಣವನ್ನು ಪ್ರಮುಖ ಆರೋಪಿ ಬಗೆಹರಿಸಿಕೊಟ್ಟಿದ್ದ. ಅದನ್ನೇ ಬಂಡವಾಳ ಮಾಡಿಕೊಂಡ ಯೋಗಾನಂದ್, ಹೊನ್ನೇನಹಳ್ಳಿ ಸ್ಥಳೀಯ ಚಾನಲ್​ ಹಾಗೂ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿಸಿದ್ದ. ಕೋಟಿ ಕೋಟಿ ಬಂಡವಾಳವಾಗಿ ಹೂಡಿಕೆ ಮಾಡಿಸಿಕೊಂಡ ಬಳಿಕ ಮೋಸ ಮಾಡಿದ್ದಾನೆ ಎಂದು ಕೃಷ್ಣೇಗೌಡರಿಗೆ ಗೊತ್ತಾಗುತ್ತಿದ್ದಂತೆ ಯೋಗಾನಂದ್ ಜೊತೆ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ.

ಬಳಿಕ ಕೃಷ್ಣೇಗೌಡರು ಹಣ ವಾಪಸ್​​ ಕೊಡುವಂತೆ ಒತ್ತಾಯಿಸಿದ್ದರು. ಯೋಗಾನಂದ ಹಣ ಹಿಂದಿರುಗಿಸಲು ನಿರಾಕರಿಸಿದ ಹಿನ್ನೆಲೆ ಕೃಷ್ಣೇಗೌಡ, 2022 ರ ನವೆಂಬರ್​ನಲ್ಲಿ ಆತನನ್ನೇ ಅಪಹರಿಸಿ ಸುಮಾರು 9 ದಿನಗಳ ಕಾಲ ಗೌಪ್ಯ ಸ್ಥಳದಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದ ಆರೋಪವಿದೆ. ಹಲ್ಲೆ ಮಾಡಿದ ಬಗ್ಗೆ ಹಾಸನ ಗ್ರಾಮಾಂತರ ಠಾಣೆಗೆ ಯೋಗಾನಂದ ದೂರು ಕೂಡ ನೀಡಿದ್ದರು. ಯೋಗಾನಂದ ವಿರುದ್ಧ ವಂಚನೆ ಆರೋಪದಲ್ಲಿ ಕೃಷ್ಣೇಗೌಡ ಕೂಡ ಪ್ರತಿದೂರು ನೀಡಿದ್ದರು. ಅನಂತರ ಹಾಸನ ನಗರದ ಹೊರವಲಯ ಕೆಐಎಡಿಬಿ ಬಳಿ ಆಗಸ್ಟ್ 9 ರಂದು ಕೃಷ್ಣೇಗೌಡ ಕೊಲೆ ನಡೆದಿತ್ತು.

ಇದನ್ನೂಓದಿ:ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

Last Updated : Nov 25, 2023, 6:16 PM IST

ABOUT THE AUTHOR

...view details