ಹಾಸನ:ಪ್ರಧಾನಿ ನರೇಂದ್ರ ಮೋದಿಗೆ ದೊಡ್ಡ ಗಂಡಾಂತರ ಕಾದಿದ್ದು, ದೈವಿಕ ಕಾರ್ಯಗಳಿಂದ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ ಮೃತ್ಯು ಕೂಡಾ ಎದುರಾಗಬಹುದು. ಮೋದಿ ಅವರು ಈ ಗಂಡಾಂತರದಿಂದ ಪಾರಾಗಿಬಿಟ್ಟರೆ ಇನ್ನು ಎರಡೂವರೆ ವರ್ಷ ಅವರಿಗೆ ಯಾವುದೇ ಭಯವಿಲ್ಲವೆಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ಹಾಸನಕ್ಕೆ ಭೇಟಿ ನೀಡಿ ಹಾಸನಾಂಬೆಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 4ರ ನಂತರ ಮೋದಿಗೆ ಗಂಡಾಂತರವಿದೆ. ಅವರು ಈ ಅವಧಿಯಲ್ಲಿ ಅಪಮೃತ್ಯು ಗಂಡಾಂತರದಿಂದ ಪಾರಾದರೆ ಇನ್ನೂ ಎರಡುವರೆ ವರ್ಷ ಪ್ರಧಾನಿಯಾಗಿ ಇರುತ್ತಾರೆಂದು ಹೇಳಿದರು.
ಸದ್ಯದಲ್ಲೇ ಪ್ರಧಾನಿಗೆ ಗಂಡಾಂತರ ಕಾದಿದೆಯಂತೆ.....ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಇನ್ನು, ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ, ರಾಜ್ಯ ರಾಜಕೀಯ ಕುರಿತಂತೆಯೂ ಭವಿಷ್ಯ ನುಡಿದಿರುವ ಗುರೂಜಿ, ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಯಾವೊಬ್ಬ ವ್ಯಕ್ತಿಯೂ ಮುಂದೆ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ಹೊಸ ಸರ್ಕಾರ ಬಂದ್ರೆ ಹೊಸಬರೇ ಸಿಎಂ ಆಗ್ತಾರೆ. ಯಾವುದೇ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರೋದಿಲ್ಲವೆಂದು ಭವಿಷ್ಯ ನುಡಿದಿದ್ದಾರೆ.
ಡಿಕೆಶಿ ಸಿಎಂ ಆಗೋದು ಖಚಿತ: ಯಡಿಯೂರಪ್ಪಗೆ ಪೂರ್ಣ ಅವಕಾಶ ಇಲ್ಲವೇ ಇಲ್ಲ. ಕೋಟಿ ಕೋಟಿ ಹಣ ಮಾಡಿದವರು ಕೃಷ್ಣ ಜನ್ಮಸ್ಥಳಕ್ಕೆ ಸೇರಲೇಬೇಕು. ಮುಂದಿನ 10 ವರ್ಷದಲ್ಲಿ ಒಮ್ಮೆ ಡಿಕೆಶಿ ಸಿಎಂ ಆಗೋದು ನಿಶ್ಚಿತವೆಂದು ಗುರೂಜಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಇನ್ನು ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಕೃತಿ ವಿಕೋಪಗಳಾಗಲಿವೆ. ಜನರು ಎಚ್ಚರಿಕೆಯಿಂದ ಇರಬೇಕೆಂದು ಸ್ವಾಮೀಜಿ ಮುನ್ಸೂಚನೆ ನೀಡಿದ್ದಾರೆ.