ಹಾಸನ:ಗುರು ಸಿದ್ದರಾಮೇಶ್ವರ ಜಯಂತಿ ಆಚರಿಸುವ ವೇಳೆ ಸಿದ್ದರಾಮೇಶ್ವರರನ್ನ ವಡ್ಡರ ಸಿದ್ಧರಾಮ ಎಂಬ ಹೆಸರಿನ ಮೂಲಕ ಗುರುತಿಸುತ್ತಾರೆ ಎಂದು ಹೇಳಿಕೆ ನೀಡಿದ ಶಾಸಕ ಕೆ. ಎಂ. ಶಿವಲಿಂಗೇಗೌಡ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮೇಶ್ವರರ ಜಾತಿ ಕುರಿತು ಹೇಳಿಕೆ: ಶಾಸಕ ಶಿವಲಿಂಗೇಗೌಡ ವಿರುದ್ಧ ಆಕ್ರೋಶ
ಅರಸೀಕೆರೆ ತಾಲೂಕು ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ. ಎಂ. ಶಿವಲಿಂಗೇಗೌಡ ಭಾಗವಹಿಸಿದ್ದರು.
ಅರಸೀಕೆರೆ ತಾಲೂಕು ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ಗುರು ಸಿದ್ದರಾಮೇಶ್ವರ ಜಯಂತಿಯ ಸಭೆಯಲ್ಲಿ ಮಾತನಾಡಿದ ಶಾಸಕ ಕೆ. ಎಂ. ಶಿವಲಿಂಗೇಗೌಡ ನಾವು ಈಗಾಗಲೇ ಕೆಲವು ಪ್ರಮುಖರನ್ನು ಜಾತಿ ಆಧಾರದ ಮೇಲೆ ಗುರುತಿಸಿದ್ದೇವೆ. ರಾಷ್ಟ್ರಕವಿ ಕುವೆಂಪು ಅವರನ್ನ ಒಕ್ಕಲಿಗ ಜಾತಿಗೆ ಮೀಸಲು ಮಾಡಿದ್ದೇವೆ. ಈಗ ಈ ಸಿದ್ದರಾಮೇಶ್ವರರನ್ನ ಕೆಲವರು ವಡ್ಡರ ಸಿದ್ದರಾಮ ಎಂದರೆ ಮತ್ತೊಂದು ಪಂಗಡದವರು ಶಿವಯೋಗಿ ಸಿದ್ಧರಾಮ ಅಂತಾರೆ ಎಂದರು.
ಸಿದ್ಧರಾಮ ಮಹಾನ್ ವ್ಯಕ್ತಿ . ಅವರು 12ನೇ ಶತಮಾನದ ಬಸವಣ್ಣನವರ ಕಾಲದಲ್ಲಿದ್ದು, ಅವರ ಕಾಲದಲ್ಲಿ ಸಾಕಷ್ಟು ಕೆರೆಕಟ್ಟೆಗಳನ್ನು ನಿರ್ಮಾಣವು ಮಾಡಿದ್ದಾರೆ ಎಂಬುದು ವಚನಗಳ ಮೂಲಕ ನಮಗೆ ತಿಳಿಯುತ್ತದೆ ಎಂದರು.