ಅರಕಲಗೂಡು(ಹಾಸನ):ಮುಂಬೈನಿಂದ ತಾಲೂಕಿಗೆ ಬಂದ ಐವರಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಇಂದು ದೃಢಪಟ್ಟಿದೆ.
ಮುಂಬೈ ನಂಟು: ಅರಕಲಗೂಡಿನಲ್ಲಿ ನಾಲ್ವರಿಗೆ ಸೋಂಕು
ಜೂನ್ 13ರಂದು ಮುಂಬೈನಿಂದ ಹೊರಟು ಜೂನ್ 14ರಂದು ಅರಕಲಗೂಡಿಗೆ ಬಂದ ಐವರಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಕೊರೊನಾ ವೈರಸ್
ಜೂನ್ 14ರಂದು ಅರಕಲಗೂಡಿಗೆ ಬಂದಿರುವ ತಾಲೂಕಿನ ಕಸಬಾ ಹೋಬಳಿಯ ಸಿದ್ದೇಗೌಡನ ಕೊಪ್ಪಲು ಮೂಲದ ಐವರಲ್ಲಿ ಪುರುಷರೊಬ್ಬರಿಗೆ ನೆಗೆಟಿವ್ ಬಂದಿದ್ದರೆ, ನಾಲ್ವರು ಮಹಿಳೆಯರಿಗೆ ಸೋಂಕು ದೃಢವಾಗಿದೆ.
ಮುಂಬೈನಿಂದ ಬಂದ ಇವರನ್ನು ನೇರವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಸೋಂಕಿತರು ಯಾರ ಸಂಪರ್ಕದಲ್ಲೂ ಇರಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.