ಕರ್ನಾಟಕ

karnataka

ETV Bharat / state

ಅರಕಲಗೂಡಿನಲ್ಲಿ ವಿಕಲಚೇತನರಿಗೆ ಆಹಾರ ಸಾಮಗ್ರಿಗಳ ಕಿಟ್​ ವಿತರಣೆ

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಯಲ್ಲಿ ವಿಕಲಚೇತನರನ್ನು ಗುರುತಿಸಿ ಬೆಂಗಳೂರಿನ ಉದ್ಯಮಿ ಚಿಕ್ಕ ರೇವಣ್ಣ ಆಹಾರ ಸಾಮಾಗ್ರಿಗಳ ಕಿಟ್​ ವಿತರಿಸಿದರು.

Food Kit Distribution to specially abled people
ವಿಕಲಚೇತನರಿಗೆ ಆಹಾರ ಸಾಮಗ್ರಿಗಳ ಕಿಟ್​ ವಿತರಣೆ

By

Published : May 12, 2020, 4:10 PM IST

ಅರಕಲಗೂಡು (ಹಾಸನ):ತಾಲೂಕಿನ ಹಳ್ಳಿ ಮೈಸೂರು ಹೋಬಳಿ ವ್ಯಾಪ್ತಿಯ ವಿಕಲಚೇತನರಿಗೆ ಆಹಾರ ಸಾಮಗ್ರಿಗಳ ಕಿಟ್​ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ‌ ಹೆಚ್.ವಿಶ್ವನಾಥ್, ಜಾಗತಿಕ ಸಮಸ್ಯೆಯಾಗಿ ಕಾಡುತ್ತಿರುವ ಕೊರೊನಾದಿಂದ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಮನಗಂಡು ಪುಟ್ಟಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಉದ್ಯಮಿ ಚಿಕ್ಕ ರೇವಣ್ಣ ಸಹಕಾರದೊಂದಿಗೆ ವಿಕಲಚೇತನರನ್ನು ಗುರುತಿಸಿ ಕಿಟ್​ ವಿತರಿಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು.

ದಾನಿ ಚಿಕ್ಕ ರೇವಣ್ಣ ಮಾತನಾಡಿ, ಪೌರಕಾರ್ಮಿಕರು, ವಿಕಲಚೇತನರು‌ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಈಗಾಗಲೇ 35 ಸಾವಿರ ಬಡವರಿಗೆ ದಿನಸಿ ಸಾಮಗ್ರಿಗಳ ಕಿಟ್ ಹಾಗೂ ಹಲವಾರು ಕಡೆ ಆಹಾರ ವಿತರಿಸಿ ಜನರ‌ ಹಸಿವು ನೀಗಿಸಲಾಗುತ್ತಿದೆ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಎಸ್.ಪುಟ್ಟಸ್ವಾಮಿ ಮಾತನಾಡಿ, ವಿಕಲಚೇತನರು ಹೆಚ್ಚು ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಹೋಬಳಿಯ ಎಲ್ಲಾ ಪಂಚಾಯತ್​ ವ್ಯಾಪ್ತಿಯಲ್ಲಿ ಸರ್ವೆ ನಡೆಸಿ ವಿಕಲಚೇತನರನ್ನು ಗುರುತಿಸಿ ಆಹಾರ ಸಾಮಾಗ್ರಿಗಳನ್ನು‌ ವಿತರಿಸಿ ಸಹಾಯ ಮಾಡಲಾಗುತ್ತಿದೆ ಎಂದರು.

For All Latest Updates

TAGGED:

ABOUT THE AUTHOR

...view details