ಹಾಸನ: ಕೊರೊನಾ ಕರ್ಫ್ಯೂ ನಡುವೆ ಚನ್ನರಾಯಪಟ್ಟಣದಲ್ಲಿ ಗುಂಡಿನ ಸಪ್ಪಳ ಕೇಳಿಸಿದ್ದು, ಆ ಗುಂಡಿನ ಮೊರೆತವನ್ನು ಮಾಡಿದ ರೌಡಿಶೀಟರ್ಗಳನ್ನು ಕೇವಲ ಮೂರು ದಿನಗಳ ಅಂತರದಲ್ಲಿ ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಚನ್ನರಾಯಪಟ್ಟಣ ತಾಲೂಕು ಮೂಲದ ಕ್ಯಾಂಟೀನ್ನಲ್ಲಿ ಕೆಲಸ ಮಾಡಿಕೊಂಡಿದ್ದ ಮಾಸ್ತಿಗೌಡ @ ಮಾಸ್ತಿ, ಕಿರಣ್ ಕುಮಾರ್@ ಬಾಂದು, ಜಗದೀಶ್ ಬಿಜಿ @ ಜಗ, ಚಂದನ್@ ಘಜನಿ, ಮನು@ ಅಮ್ಮಕಾಗೆ, ಸಿ. ಎಂ. ಬಾಬು @ ಮಣ್ಮುಕ್ಕಿ, ಸಿ. ಕೆ. ರವಿಪ್ರಸಾದ್ @ ಟಿವಿ ರವಿ, ಲೋಕೇಶ್ @ ಹುಚ್ಚ ಬಂಧಿತ ರೌಡಿಶೀಟರ್ ಹಾಗೂ ಆರೋಪಿಗಳಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಮಾತನಾಡಿದರು ಪ್ರಕರಣದ ಹಿನ್ನೆಲೆ: ಚನ್ನರಾಯಪಟ್ಟಣ ತಾಲೂಕು ಯಾಚೇನಹಳ್ಳಿ ಗ್ರಾಮದ ರೌಡಿಶೀಟರ್ ಚೇತು, ಈ ಪ್ರಕರಣದ ಎರಡನೇ ಆರೋಪಿ ಕಿರಣ್ ಕುಮಾರ್ ಎಂಬುವವನನ್ನು ಕಿಡ್ನಾಪ್ ಮಾಡಿ ಆತನಿಂದ 5.5ಲಕ್ಷ ರೂ. ವಸೂಲಿ ಮಾಡಿದ್ದ. ಇದನ್ನ ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಚೇತುವಿನ ಕಾಟದಿಂದ ಬೇಸತ್ತಿದ್ದ ಕಿರಣ್, ಹೇಗಾದರೂ ಮಾಡಿ ಚೇತುವನ್ನು ಮುಗಿಸಲೇಬೇಕು ಅಂತ ಯೋಚಿಸಿ, ಅದರಂತೆ ತನ್ನ ಬಳಿ ಇದ್ದ ಡಿಬಿಬಿಎಲ್ ಬಂದುಕಿನ ಜೊತೆಗೆ 5 ಲಕ್ಷಕ್ಕೆ ಮೊದಲನೇ ಆರೋಪಿ ಮಾಸ್ತಿ ಗೌಡನಿಗೆ ಸುಪಾರಿ ಕೊಟ್ಟಿದ್ದ.
ಸುಪಾರಿ ನೀಡಿದ್ದ ಬೆನ್ನಲ್ಲೇ ಮೇ 1ರಂದು ಬೆಂಗಳೂರಿನಿಂದ ಸ್ವಗ್ರಾಮ ಯಾಚೇನಹಳ್ಳಿಗೆ ಬಂದಿದ್ದ ರೌಡಿಶೀಟರ್ ಚೇತುವನ್ನು ಮುಗಿಸಲು ಸ್ಕೆಚ್ ಹಾಕಿ ಬಂದು, ಮೇ 3ರಂದು ಮಧ್ಯಾಹ್ನ 2 ಗಂಟೆಯ ಸಂದರ್ಭದಲ್ಲಿ ಹೊನ್ನಶೆಟ್ಟಿಯಲ್ಲಿ ಬಳಿಯ ಆಲ್ಪೋನ್ಸ್ ನಗರ ಬಳಿ ಸ್ಕಾರ್ಫಿಯೋದಲ್ಲಿ ಬಂದ ಯಾಚೇನಹಳ್ಳಿ ಚೇತುವಿನ ಮೇಲೆ ಮೊದಲ ಆರೋಪಿ ಮಾಸ್ತಿ, ಕಾರಿನಿಂದ ಇಳಿದು ತಾನು ತಂದಿದ್ದ ಬಂದೂಕಿನಿಂದ 2 ಬಾರಿ ಫೈರಿಂಗ್ ಮಾಡಿದ್ದಾನೆ. ಸ್ಕಾರ್ಪಿಯೋ ಕಾರಿನ ಚಾಲಕ ಜಾಗೃತಗೊಂಡು ತಕ್ಷಣ ಕಾರನ್ನು ಹಿಂದಕ್ಕೆ ವೇಗವಾಗಿ ತಿರುಗಿಸಿಕೊಂಡು ಪರಾರಿಯಾಗಿದ್ದಾನೆ. ಯಾಚೇನಹಳ್ಳಿ ಚೇತುವಿನ ಮೇಲೆ ಸುಮಾರು 20 ಪ್ರಕರಣಗಳು ದಾಖಲಾಗಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಇದರ ಬೆನ್ನಲ್ಲಿಯೇ ಆರೋಪಿಗಳ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಎಎಸ್ಪಿ ನಂದಿನಿ, ಡಿವೈಎಸ್ಪಿ ಲಕ್ಷ್ಮೇಗೌಡ, ಹಾಗೂ ವೃತ್ತನಿರೀಕ್ಷಕ ಸುಬ್ರಹ್ಮಣ್ಯ ನೇತೃತ್ವದ ವಿಶೇಷ ಎರಡು ತಂಡಗಳನ್ನು ರಚನೆ ಮಾಡಿದ್ದರು. ತನಿಖೆಯ ವೇಳೆ ಕೆ ಆರ್ ಪೇಟೆ ತಾಲೂಕಿನ ಆನೆಗೋಳ ಬಳಿಯ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಆರೋಪಿಗಳನ್ನು ಕೊನೆಗೂ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಓದಿ:ಬೆಡ್ ಬ್ಲಾಕಿಂಗ್ ಕುರಿತು ಧ್ವನಿಯೆತ್ತಿದ್ದಕ್ಕಾಗಿ ನಮ್ಮ ಮೇಲೆಯೇ ಆರೋಪ: ಶಾಸಕ ಸತೀಶ್ ರೆಡ್ಡಿ