ಹಾಸನ:ಅಗ್ನಿ ಶಾಮಕ ಇಲಾಖೆ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಇರುವುದಿಲ್ಲ. ಶಾಲಾ ಪಠ್ಯ ಕ್ರಮದ ಜೊತೆಗೆ ಅಗ್ನಿ ಅವಘಡಗಳಾದಾಗ ಜಾಗೃತಿ ಮೂಡಿಸುವ ಕೆಲಸ ಸರ್ಕಾರ ನಿರ್ದೇಶನದಂತೆ ಇಲಾಖೆ ಮಾಡ್ತಿದೆ ಎಂದು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ನಿರೀಕ್ಷಕ ಸಿದ್ದೇಗೌಡ ಹೇಳಿದ್ರು.
ಬೆಂಕಿ ಅವಘಡದಿಂದ ರಕ್ಷಿಸಿಕೊಳ್ಳಲು ತುರ್ತು ಸೇವೆಗಳ ಪ್ರಾತ್ಯಕ್ಷಿಕೆ ನೀಡಿದ ಅಗ್ನಿ ಶಾಮಕದಳ
ಅಗ್ನಿ ಶಾಮಕ ಇಲಾಖೆ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಇರುವುದಿಲ್ಲ. ಶಾಲಾ ಪಠ್ಯ ಕ್ರಮದ ಜೊತೆಗೆ ಅಗ್ನಿ ಅವಘಡಗಳಾದಾಗ ಜಾಗೃತಿ ಮೂಡಿಸುವ ಕೆಲಸ ಸರ್ಕಾರ ನಿರ್ದೇಶನದಂತೆ ಇಲಾಖೆ ಮಾಡ್ತಿದೆ ಎಂದು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ನಿರೀಕ್ಷಕ ಸಿದ್ದೇಗೌಡ ಹೇಳಿದ್ರು.
ಹಾಸನ ಜಿಲ್ಲೆಯ ಆಲೂರು ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜ್ ನ ವಿದ್ಯಾರ್ಥಿಗಳಿಗೆ ಬೆಂಕಿ ಅವಘಡ ಮತ್ತು ತುರ್ತು ಸಂದರ್ಭಗಳಲ್ಲಿ ಜೀವಹಾನಿ ಸೇರಿದಂತೆ ಇತರೆ ಅನಾಹುತಗಳಿಂದ ಪಾರಾಗುವ ಮತ್ತು ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಸಿದ್ದೇಗೌಡ ಅವರು ಮಾತನಾಡಿದ್ರು.
ಅಗ್ನಿ ಸಂಭವಿಸಿದಾಗ ಅದನ್ನ ನಂದಿಸುವ ಜೊತೆಗೆ ಪ್ರಾಣ ರಕ್ಷಣೆ, ವಸ್ತುಗಳ ರಕ್ಷಣೆಯ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಇಲಾಖೆಗೆ ವಹಿಸಿದ್ದು, ಅದರಂತೆ ಪ್ರತಿಯೊಂದು ಶಾಲೆಗಳಗೂ ಹೋಗಿ ಅಗ್ನಿ ಶಾಮಕ ದಳದವರ ಕಾರ್ಯವೈಖರಿ ಜೊತೆ ರಕ್ಷಣೆ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಮಾಡುತ್ತಿದ್ದೇವೆ. ಹಾಗೇಯೇ, ವಿದ್ಯಾರ್ಥಿಗಳೂ ಅಗ್ನಿ ಅನಾಹುತವಾದಾಗ ತಮ್ಮ ಸುತ್ತ-ಮುತ್ತಲಿನ ಸಾರ್ವಜನಿಕರಿಗೆ ಬೆಂಕಿ ನಂದಿಸುವ ಮತ್ತು ರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು. ಬೆಂಕಿ ಅವಘಡ ಸಂಭವಿಸಿದಾಗ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಿ ತುರ್ತು ಸಂದರ್ಭಗಳಲ್ಲಿ ಮನೋಸ್ತೈರ್ಯದಿಂದ ಬೆಂಕಿಯನ್ನು ನಂದಿಸುವುದರ ಜೊತೆಗೆ ಸೇವಾ ಮನೋಬಾವನೆ ಬೆಳಸಿಕೊಳ್ಳಬೇಕು ಎಂದ್ರು.