ಕರ್ನಾಟಕ

karnataka

ETV Bharat / state

ಅಂತಾರಾಷ್ಟ್ರೀಯ ಜುಡೋ ಸ್ಪರ್ಧೆಗೆ ಆಯ್ಕೆಯಾದ ಪೂಜಾ: ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಗ್ರಾಮೀಣ ಪ್ರತಿಭೆ

ಕೋರಿಯಾದಲ್ಲಿ ಆಗಸ್ಟ್ 30ರಿಂದ ಸೆಪ್ಟಂಬರ್ 5ರವರೆಗೆ ನಡೆಯುವ ಅಂತಾರಾಷ್ಟ್ರೀಯ ಜುಡೋ ಸ್ಪರ್ಧೆಗೆ ಆಯ್ಕೆಯಾಗಿರುವ ಗ್ರಾಮೀಣ ಪ್ರತಿಭೆಗೆ ಆರ್ಥಿಕ ನೆರವಿನ ಸಹಾಯ ಬೇಕಿದೆ. ಕ್ರೀಡಾಸಕ್ತರು, ಸಾರ್ವಜನಿಕರು ಸಹಾಯ ಮಾಡುವಂತೆ ಕ್ರೀಡಾಪಟು ಹೆಚ್.ಎ. ಪೂಜಾ ಅವರ ತಂದೆ ಮನವಿ ಮಾಡಿದ್ದಾರೆ.

ಜುಡೋ ಅಭ್ಯಾಸ ನಡೆಸಿರುವ ಹೆಚ್.ಎ.ಪೂಜಾ

By

Published : Aug 23, 2019, 10:02 PM IST

ಹಾಸನ‌: ಕೋರಿಯಾದ ಚುಂಗ್​ಜು ಎಂಬಲ್ಲಿ ಆಗಸ್ಟ್ 30ರಿಂದ ಸೆಪ್ಟಂಬರ್​ 5ರವರೆಗೆ ನಡೆಯುವ ಅಂತಾರಾಷ್ಟ್ರೀಯ ಜುಡೋ ಸ್ಪರ್ಧೆಗೆ ಆಯ್ಕೆಯಾಗಿರುವ ಜಿಲ್ಲೆಯ ಕ್ರೀಡಾಪಟು ಹೆಚ್.ಎ. ಪೂಜಾಗೆ ಆರ್ಥಿಕ ನೆರವಿನ ಸಹಾಯ ಬೇಕಿದೆ.

ಜುಡೋ ಅಭ್ಯಾಸ ನಡೆಸಿರುವ ಹೆಚ್.ಎ.ಪೂಜಾ

ತಾಲೂಕಿನ ದುದ್ದ ಹೋಬಳಿ ಹೆರಗು ಗ್ರಾಮದ ಕ್ರೀಡಾ ಪ್ರತಿಭೆ ಹೆಚ್.ಎ. ಪೂಜಾ ಬೆಳಗಾವಿಯ ಕ್ರೀಡಾ ಶಾಲೆಯಲ್ಲಿ ಬಿ.ಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ವಿಮಾನಯಾನ, ವಸತಿ, ಕ್ರೀಡಾ ಸಾಮಗ್ರಿಗಳಿಗಾಗಿ ₹ 60 ಸಾವಿರ ಬೇಕಾಗಿದೆ ಎಂದು ಪೂಜಾ ತಂದೆ ಹೆಚ್.ಎನ್​. ಅನಂತರಾಮು ಮನವಿ ಮಾಡಿದ್ದಾರೆ.

ಕುರಶ ಜುಡೋ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರ ಮಟ್ಟದ ಜುಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದರು ಪೂಜಾ. ಈ ಗ್ರಾಮೀಣ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಹೃದಯಿಗಳು ಸಹಾಯಹಸ್ತ ಚಾಚಬೇಕಿದೆ. ಸಹಾಯ ಮಾಡಲಿಚ್ಛಿಸುವವರು ಈ ಕೆಳಗಿನ ಬ್ಯಾಂಕ್​ ಖಾತೆಗೆ ಹಣ ಸಂದಾಯ ಮಾಡಬೇಕಿದೆ.

ಬ್ಯಾಂಕ್ ಖಾತೆ ವಿವರ

ಬ್ಯಾಂಕ್: ಕೆನರಾ ಬ್ಯಾಂಕ್
ಖಾತೆ ಸಂಖ್ಯೆ : 1896108007808
ಶಾಖೆ: ಹೆರಗು
ಐಎಫ್‌ಎಸ್‌ಸಿ ಕೋಡ್ : CNRB0001896

ABOUT THE AUTHOR

...view details