ಹಾಸನ :ಆಕಸ್ಮಿಕವಾಗಿ ಬಿದ್ದು ನಿತ್ರಾಣಗೊಂಡ ಮರಿಯಾನೆಯನ್ನು ಕಾಡಾನೆಗಳ ಹಿಂಡೊಂದು ಕರೆದೊಯ್ಯುವ ವೇಳೆ ಯದ್ವಾತದ್ವಾ ನುಗ್ಗಿದ್ದರಿಂದ ಅಪಾರ ಪ್ರಮಾಣದ ಕಾಫಿ ತೋಟ ಹಾನಿಯಾಗಿರುವ ಘಟನೆ ತಾಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ನಡೆದಿದೆ.
ನಿತ್ರಾಣಗೊಂಡ ಆನೆಮರಿ ರಕ್ಷಣೆಗೆ ಬಂದ ಕಾಡಾನೆಗಳು... ಆನೆಗಳ ದಾಂಧಲೆಗೆ ಅಪಾರ ಕಾಫಿ ತೋಟ ಹಾನಿ
ಸುಳ್ಳಕ್ಕಿ ಗ್ರಾಮದ ದಿವಾಕರ್ ಎಂಬುವರ ಕಾಫಿ ತೋಟದಲ್ಲಿ ಮರಿಯಾನೆ ನಿತ್ರಾಣಗೊಂಡು ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಕಾಡಾನೆಗಳ ಹಿಂಡೊಂದು ಮರಿಯಾನೆ ಕರೆದೊಯ್ಯಲು ಸತತ ಯತ್ನ ಮಾಡಿದ್ದರಿಂದ ಕೇವಲ ದಿವಾಕರ್ರವರ ತೋಟ ಮಾತ್ರವಲ್ಲದೆ ಸುತ್ತಮುತ್ತಲಿನ ತೋಟಗಳಲ್ಲಿ ವ್ಯಾಪಕ ಬೆಳೆ ಹಾನಿಯಾಗಿದೆ.
ಆನೆಮರಿ
ಸುಳ್ಳಕ್ಕಿ ಗ್ರಾಮದ ದಿವಾಕರ್ ಎಂಬುವರ ಕಾಫಿ ತೋಟದಲ್ಲಿ ಮರಿಯಾನೆ ನಿತ್ರಾಣಗೊಂಡು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಕಾಡಾನೆಗಳ ಹಿಂಡೊಂದು ಮರಿಯಾನೆ ಕರೆದೊಯ್ಯಲು ಸತತ ಯತ್ನ ಮಾಡಿದ್ದವು. ಇದರಿಂದಾಗಿ ಕೇವಲ ದಿವಾಕರ್ ಅವರ ತೋಟ ಮಾತ್ರವಲ್ಲದೇ ಸುತ್ತಮುತ್ತಲಿನ ಅನೇಕರ ತೋಟಗಳಲ್ಲೂ ವ್ಯಾಪಕ ಬೆಳೆ ಹಾನಿಯಾಗಿದೆ.
ದಿವಾಕರ್ ಮನೆ ಸಮೀಪವೇ ಸುಮಾರು 18 ಕಾಡಾನೆ ಹಿಂಡು ದಾಳಿಯಿಡಲು ಯತ್ನಿಸಿದ್ದವು. ಇದರಿಂದ ಮನೆಯವರೆಲ್ಲರೂ ಭಯಭೀತರಾಗಿದ್ದರು. ಅಂತಿಮವಾಗಿ ಕಾಡಾನೆಗಳ ಹಿಂಡು ಮರಿಯಾನೆಯನ್ನು ಪಕ್ಕದ ಕಾಡಿಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದವು.
ಸುಳ್ಳಕ್ಕಿ, ಸತ್ತಿಗಾಲ್, ಜಾನೆಕೆರೆ, ಇಬ್ಬಡಿ ಸುತ್ತಮುತ್ತ ಕಾಡಾನೆಗಳ ಹಾವಳಿ ವ್ಯಾಪಕವಾಗಿದ್ದು, ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಕಾರ್ಮಿಕರು ಕಾಡಾನೆಗೆ ಹೆದರಿ ಕಾಫಿ ತೋಟಗಳ ಕೆಲಸಕ್ಕೂ ಬರುತ್ತಿಲ್ಲ ಎಂಬುದು ಬೆಳೆಗಾರರ ದೂರು.